ವಿಟ್ಲ, ನ 3: ಅಕ್ರಮವಾಗಿ ವಿಟ್ಲ ಕಡೆಯಿಂದ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳ ಸಹಿತ ಲಾರಿಗಳ ಚಾಲಕರನ್ನು ವಿಟ್ಲ ಪೋಲಿಸರು ಬಂದಿಸಿದ್ದಾರೆ.
ಬಂದಿತರನ್ನು ಹರೀಶ್ ಮಂಗಳೂರು. ಅಬ್ದುಲ್ ರವೂಪ್ ಬೆಳ್ತಂಗಡಿ ಮತ್ತು ದೇರಳಕಟ್ಟೆಯ ಖಲೀಲ್ ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ಪೋಲಿಸರು ಸಂಶಯದ ಮೇಲೆ ಲಾರಿಗಳನ್ನು ನಿಲ್ಲಿಸಿದಾಗ ಅಧಿಕ ಹಣಕ್ಕೆ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೋಲಿಸರು ಆರೋಪಿಗಳ ಸಹಿತ ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಿಟ್ಲ ಠಾಣೆಯ ಉಪನಿರೀಕ್ಷಕ ನಾಗರಾಜ ಮತ್ತು ಅವರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.