ಮೂಡುಬಿದಿರೆ, ಮಾ 14 (MSP): ದನಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ಆರೋಪಿಯನ್ನು ಸ್ಥಳೀಯರೇ ರೆಡ್ಹ್ಯಾಂಡಾಗಿ ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುಡ್ಡೆಯಂಗಡಿ ಸೌಹಾರ್ದನಗರ ಮಾ.13 ರ ಬುಧವಾರ ನಡೆದಿದೆ. ಪ್ರಕರಣದ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ದನ ಕಳವುಗೈಯಲು ಆರೋಪಿಗಳು ಬಳಸಿದ್ದ ಕಾರು
ಸೌಹಾರ್ದನಗರ ಪರಿಸರದಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಘಟನೆ ಹಿಂದಿನಿಂದಲೂ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ಒಂದು ದನವನ್ನು ಕಳವು ಮಾಡಲಾಗಿತ್ತು. ಇದರಿಂದ ಎಚ್ಚೆತ್ತ ಊರವರು ಒಟ್ಟಾಗಿ ಆರೋಪಿಗಳಿಗಾಗಿ ಕಾದು ಕುಳಿತಿದ್ದರು. ಆರೋಪಿಗಳು ಕಾರಿನಲ್ಲಿ ಬಂದು ದನವನ್ನು ಕಳುವುಗೈದಿದ್ದು, ತಾವು ಬಿಟ್ಟು ಹೋಗಿದ್ದ ಕಾರಿನ ಹಿಂಬದಿ ಸೀಟನ್ನು ಮರಳಿ ಕೊಂಡೊಯ್ಯಲು ಬಂದಿದ್ದಾಗ ಊರಿನವರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರೋಪಿ ಸಫಾನ್ ತಪ್ಪಿಸಿಕೊಂಡಿದ್ದು, ಖಾದರ್ ಕೈಕಂಬ ಸಮೀಪದ ಸೂರಲ್ಪಾಡಿ ಎಂದು ತಿಳಿದುಬಂದಿದೆ. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.