ಕಣ್ಣೂರು, ನ 3: ಕೇರಳ ಕಣ್ಣೂರು ಎಂಬಲ್ಲಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ ಆರು ಮಂದಿ ಸದಸ್ಯರು ಉಗ್ರ ಸಂಘಟನೆ ಸೇರಿರುವ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಸೇರಿರುವ ಇವರನ್ನು ಅಬ್ದುಲ್ ಖಯೂಮ್, ಅಬ್ದುಲ್ ಮನಾಫ್, ಶಬೀರ್ ಮಹಮ್ಮದ್ ಶಫಿ, ಸುಹೇಲ್ ಮತ್ತು ಸಫ್ವಾನ್ ಎಂದು ಗುರುತಿಸಲಾಗಿದೆ.
ಲಕ್ಷಾಂತರ ಯುವಕರನ್ನು ಸೆಳೆದುಕೊಂಡಿರುವ ಐಸಿಸ್ ಉಗ್ರ ಸಂಘಟನೆ ಕೇರಳದಲ್ಲಿ ಹೆಚ್ಚಾಗಿ ಕಾರ್ಯಪ್ರವೃತ್ತವಾಗಿರೋದು ಮತ್ತೊಮ್ಮೆ ಸಾಬೀತಾಗಿದೆ. ಕೇರಳ ಮೂಲದವರೇ ಅಧಿಕ ಸಂಖ್ಯೆಯಲ್ಲಿ ಐಸಿಸ್ ಉಗ್ರ ಸಂಘಟನೆ ಸೇರುತ್ತಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.