ಮಂಗಳೂರು, ಮಾ 14(SM): ಸಂಚಾರ ನಿಯಮ ಉಲ್ಲಂಘಿಸಿದ ಖಾಸಗಿ ಬಸ್ ಗಳ ವಿರುದ್ಧ ನಗರ ಸಂಚಾರಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ 271 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಮಾರು 32,600 ರೂಪಾಯಿಗಳನ್ನು ಪೊಲೀಸರು ದಂಡ ರೂಪಾದಲ್ಲಿ ವಸೂಲಿ ಮಾಡಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ವಿಶೇಷ ಕಾರ್ಯಾಚರಣೆಯಲ್ಲಿ ಕರ್ಕಶ ಹಾರ್ನ್ ಬಳಸಿದವರ ವಿರುದ್ದ 95 ಪ್ರಕರಣಗಳು, ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಸ್ಸನ್ನು ಚಲಾಯಿಸಿದವರ ವಿರುದ್ದ 38 ಪ್ರಕರಣಗಳು, ಪ್ರಯಾಣಿಕರಿಗೆ ಟಿಕೆಟ್ ನೀಡದೇ ಇರುವ ಕುರಿತು 79 ಪ್ರಕರಣಗಳು, ಫುಟ್ ಬೋರ್ಡ್ ನ ಮೇಲೆ ಪ್ರಯಾಣ ಮಾಡಿದ ಬಸ್ಸುಗಳ ಮೇಲೆ 9 ಪ್ರಕರಣಗಳು ಅಲ್ಲದೆ ಇತರೆ 50 ಪ್ರಕರಣಗಳನ್ನು ಕೂಡ ದಾಖಲಿಸಲಾಗಿದೆ.
ಇನ್ನು ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.