ಬೆಳ್ತಂಗಡಿ, ಮಾ 15 (MSP): ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಈಗ ಭಾರತದ ರಿಯಲ್ ಹೀರೋ ಆಗಿದ್ದಾರೆ. ಕರಾವಳಿಯ ಬಸ್ ನಲ್ಲಿ, ಟೀಂ ಇಂಡಿಯಾ ಹೊಸ ಜರ್ಸಿಯಲ್ಲಿ, ಸೀರೆಯಲ್ಲೂ ಮಿಂಚುತ್ತಿರುವ ಅಭಿನಂದನ್ ಹೆಸರು, ನವಜಾತ ಶಿಶುಗಳಿಗೂ ಇಟ್ಟು ಗೌರವಿಸೋದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಇದೀಗ ಬೆಳ್ತಂಗಡಿಯ ತಾಲೂಕಿನ ಬಾರ್ಯ ಗ್ರಾಮದ ನಿವಾಸಿಯೊಬ್ಬರು ಕೂಡಾ ತಾವು ಹೊಸದಾಗಿ ಕಟ್ಟಿಸಿರುವ ಮನೆಗೆ ವಿಂಗ್ ಕಮಾಂಡರ್ ಅಭಿನಂದನ್ ಎಂದು ನಾಮಕರಣ ಮಾಡಿ ಅವರಿಗೆ ವಿಶೇಷ ಗೌರವವನ್ನು ನೀಡಿದ್ದಾರೆ.
ಉಪ್ಪಿನಂಗಡಿಯ ಲಾಂಡ್ರಿ ಶಾಪ್ ಹೊಂದಿರುವ ಬಾರ್ಯ ಗ್ರಾಮದಲ್ಲಿ ಕುಶಲಪ್ಪ ಪೂಜಾರಿ ಮತ್ತು ದೇವಿಕಾ ದಂಪತಿ ಹೊಸ ಮನೆ ನಿರ್ಮಿಸಿದ್ದು, ಗೃಹಪ್ರವೇಶದ ಆಮಂತ್ರಣ ಪತ್ರಿಕೆಯಲ್ಲಿ ’ಅಭಿನಂದನ್ ’ ಎಂದು ಮನೆಯ ಹೆಸರು ನಮೂದಿಸಿದ್ದಾರೆ. ಏ.10 ರಂದು ಗೃಹ ಪ್ರವೇಶ ನಡೆಯಲಿದೆ. ನಾನೊಬ್ಬ ಲಾಂಡ್ರಿ ಮಾಲೀಕ , ನಾನು ದೇಶ ಕಾಯುಕ ಸೈನಿಕನಾಗಿಲ್ಲ, ಆದರೆ ಸೈನಿಕರ ಬಗ್ಗೆ ನನಗೆ ಹೆಮ್ಮೆ ಇದೆ ಅವರ ತ್ಯಾಗ- ಬಲಿದಾನವನ್ನು ಸ್ಮರಿಸುವಂತಹ ಸಣ್ಣ ಕೆಲಸವಾನ್ನ ನಾನು ಮಾಡಬಲ್ಲೆ . ನಮ್ಮ ದೇಶದ ವೀರಯೋಧ ಅಭಿನಂದನ್ ಇಡೀ ಸೈನ್ಯಕ್ಕೆ ಹಾಗೂ ದೇಶಕ್ಕೆ ಸ್ಪೂರ್ತಿ ತುಂಬಿದ್ದಾರೆ. ಅವರ ಸೇವೆಯನ್ನು ನಿರಂತರ ನೆನೆಯುವ ಸಲುವಾಗಿ ಅಭಿನಂದನ್ ಹೆಸರನ್ನು ನಮ್ಮ ಮನೆಗೆ ನಾಮಕರಣ ಮಾಡಿದ್ದೇನೆ ಎಂದು ಹೇಳಿತ್ತಾರೆ.