ಕಾರ್ಕಳ,ಮಾ 16 (MSP): ಇಲಾಖೆಗಳ ವಾಹನ ಹಂಚಿಕೆಯಲ್ಲಿ ಹೊಸ ವಿವಾದವೊಂದು ತಲೆ ಎತ್ತಿದೆ. ಹೆಬ್ರಿ ತಾಲೂಕು ರಚನೆಗೊಂಡು ಬೆನ್ನಲ್ಲೆ ಹೊಸ ತಹಶೀಲ್ದಾರ್ ನೇಮಕಗೊಂಡಿದ್ದಾರೆ. ಸರಕಾರಿ ಕಾರ್ಯಗಳಿಗೆ ಇವರು ಓಡಾಡುವುದಕ್ಕೆ ಸರಕಾರಿ ವಾಹನ ಇಲ್ಲದೇ ಹೋದುದರಿಂದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯ ವಾಹನವನ್ನು ಚುನಾವಣೆಯ ನಿಮಿತ್ತ ಇವರಿಗೆ ಒಪ್ಪಿಸಿ ಜಿಲ್ಲಾಡಳಿತ ಅದೇಶ ಹೊರಡಿಸಿದೆ.
ಮಾರ್ಚ್ 21ರಿಂದ ಎಪ್ರಿಲ್ 4 ರ ತನಕ ಎಸ್ಎಸ್ ಎಲ್ಸಿ ಪರೀಕ್ಷೆ ಇರುವುದರಿಂದ ಕ್ಷೇತ್ರಶಿಕ್ಷಣಾಧಿಕಾರಿಯವರು ಸರಕಾರಿ ಕರ್ತವ್ಯದ ಮೇರೆಗೆ ಓಡಾಟಲು ವಾಹನ ವ್ಯವಸ್ಥೆ ಇಲ್ಲದೇ ಹೋದುದರಿಂದ ಹೊಸ ವಿವಾದ ತಲೆದೋರಿತ್ತು. ಸಮಸ್ಸೆಯನ್ನು ಮನಗಂಡ ಜಿಲ್ಲಾಡಳಿತವು ಕಾರ್ಕಳ ಎಪಿಎಂಸಿ ಜೀಪನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಸ್ತಾಂತರಿಸಿದೆ.
ಈ ಗೊಂದಲದ ನಡುವೆ ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಹೆಬ್ರಿ ತಹಶೀಲ್ದಾರ್ಗೆ ನೀಡಲಾಗಿದ್ದ ಜೀಪಿನ ಮುಂಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ ಎಂಬ ಫಲಕವೊಂದಿದ್ದು, ಅದರ ಮೇಲ್ಭಾಗಕ್ಕೆ ಸ್ವಿಕರ್ವೊಂದು ಅಳವಡಿಸಿದ್ದು, ಕರ್ನಾಟಕ ಸರಕಾರ ತಹಶೀಲ್ದಾರ್ ತಾಲೂಕು ದಂಡಾಧಿಕಾರಿ ಎಂದು ಮುದ್ರಿಸಲಾಗಿರುವ ಸ್ವಿಕರ್ ಕಂಡುಬಂದಿದೆ.
ಚುನಾವಣಾ ಜರೂರು ಎಂದು ಬರೆಯಬಹುದಿತ್ತು.ಚುನಾವಣೆ ಸಂಬಂಧಿಸಿದಂತೆ ಸರಕಾರಿ ಮಟಮ್ಟದಲ್ಲಿರುವ ವಿವಿಧ ಇಲಾಖೆಗಳ ವಾಹನಗಳನ್ನು ಬಳಸುತ್ತಿದ್ದು, ಆ ಎಲ್ಲಾ ವಾಹನಗಳ ಗ್ಲಾಸ್ನ ಮೇಲೆ ಚುನಾವಣಾ ಜರೂರು ಎಂದು ಬರೆಯುವ ಕ್ರಮ ಪ್ರಸಕ್ತ ದಿನಗಳ್ಲೂ ಚಾಲ್ತಿಯಲ್ಲಿದೆ. ಹೆಬ್ರಿ ತಹಶೀಲ್ದಾರ್ ಅವರಿಗೆಂದೇ ಹೊಸ ವಾಹನ ಬಾರದೇ ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಬಂದಿದ್ದ ಮತ್ತೊಂದು ಇಲಾಖೆಯ ಅಧೀನದಲ್ಲಿರುವ ವಾಹನಕ್ಕೆ ಹೊಸ ಸ್ವಿಕರ್ ಅಳವಡಿಸಿ ಹೊಸ ವಿವಾದಕ್ಕೆ ಕಾರಣವಾಗಿದೆ.
ತೆರವುಗೊಂಡ ಸ್ಟಿಕರ್
ವಿವಾದದ ಕೇಂದ್ರ ಬಿಂದುವಾಗಿರುವ ವಾಹನದ ಫೋಟೋ ಸ್ವಿಕರ್ನ್ನು ಅದರ ಚಾಲಕ ತೆರವು ಗೊಳಿಸಿದ್ದಾರೆ.