ಮಂಗಳೂರು, ನ 4: ಅಕ್ರಮವಾಗಿ ಸಾಗಿಸುತ್ತಿದ್ದ ಹಾಗೂ ದಾಸ್ತಾನಿರಿಸಲಾಗಿದ್ದ ಸ್ಪಿರಿಟನ್ನು ಮಂಗಳೂರು ಸಿಸಿಬಿ ಪೊಲೀಸರು ಕೊಣಾಜೆಯ ಅಂಬ್ಲಮೊಗರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಮೋಹನ್ ದಾಸ್ ಎಂ. ಶೆಟ್ಟಿ, ಕೋಡಿ ಮನೆ ನಿವಾಸಿ ಭೋಜ ಕೊಟ್ಟಾರಿ, ಡೆನ್ಜಿಲ್ ವಿಕ್ಸನ್ ಡಿಸೋಜಾ ಬಂಧಿತ ಆರೋಪಿಗಳು.
ಆರೋಪಿಗಳಿಂದ 350 ಲೀಟರ್ ಸ್ಪಿರಿಟ್, 4 ಮೊಬೈಲ್ ಫೋನ್, ಸಾಗಾಟಕ್ಕೆ ಬಳಸಿದ ಕಾರು ಸೇರಿದಂತೆ ಸುಮಾರು 7 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.