ಮಂಗಳೂರು, ನ 4: ನಗರದ ನೀರುಮಾರ್ಗ ಎಂಬಲ್ಲಿ ವ್ಯಕ್ತಿಯೋರ್ವ ಬಾವಿಯಿಂದ ತೆಂಗಿನಕಾಯಿ ತೆಗೆಯಲು ಹೋಗಿ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಮೃತ ಪಟ್ಟಿರುವ ದಾರುಣ ಘಟನೆ ನಡೆದಿದೆ.
ಬಾವಿಗೆ ಬಿದ್ದ ದುರ್ದೈವಿಯನ್ನು ಬರ್ನಾಡ್ ಕ್ರಾಸ್ತ ಎಂದು ಗುರುತಿಸಲಾಗಿದೆ. ಪೆದಮಲೆ ಹೌಸ್ ಕೆಲರೈ ಕ್ರಾಸ್ ಬಳಿಯ ನಿವಾಸಿಯಾಗಿರುವ ಇವರು ಮನೆಯಲ್ಲಿ ಏಕಾಂಗಿಯಾಗಿದ್ದರು. ಜೊತೆಗೆ ಮಾನಸಿಕ ಖಿನ್ನತೆಯಿಂದ ಮೃತ ವ್ಯಕ್ತಿ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಬಾವಿಗೆ ಬಿದ್ದಿದ್ದ ತೆಂಗಿನಕಾಯಿಯನ್ನು ತೆಗೆಯಲು ಬರ್ನಾಡ್ ಮುಂದಾಗಿದ್ದು, ಹಗ್ಗ ಕಟ್ಟಿ ಬಾವಿಗೆ ಇಳಿದಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ನಗರದ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.