ಮಂಗಳೂರು, ಮಾ 21(SM): ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ ನಡೆದು ಮೂರು ವರ್ಷಗಳಾಗಿದ್ದು, ಇದುವರೆಗೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದೇಶಪ್ರೇಮಿ ಸಂಘಟನೆ ಖಂಡಿಸಿದೆ.
ವಿನಾಯಕ ಬಾಳಿಗಾ ನಡೆದ ಹಾದಿಯಲ್ಲಿ ಹೆಜ್ಜೆ ಹಾಕೋಣ ಎನ್ನುವ ಧ್ಯೇಯದೊಂದಿಗೆ, ದೇಶಪ್ರೇಮಿ ಸಂಘಟನೆ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಸಿತು. ನಗರದ ಕಾರ್ ಸ್ಟ್ರೀಟ್ ಬಳಿಯಿರುವ ವೆಂಕಟರಮಣ ದೇವಳದ ಬಳಿಯಿಂದ ಬಾಳಿಗಾ ಮನೆ ತನಕ ಮೆರವಣಿಗೆ ನಡೆಸಲಾಯಿತು. ಬಳಿಕ ಬಾಳಿಗಾ ಅವರ ಮನೆ ಸಮೀಪ ಸಭೆ ಸೇರಿದರು.
ಮೆರವಣಿಗೆ ಹಾಗೂ ಸಭೆಯ ನೇತೃತ್ವವನ್ನು ನರೇಂದ್ರ ನಾಯಕ್ ವಹಿಸಿದ್ದರು.