ಬೆಳ್ತಂಗಡಿ,ಮಾ 22(MSP): ತಾಲೂಕಿನ ಸವಣಾಲು ಗ್ರಾಮದ ಫಲ್ಗುಣಿ ನದಿಗಳೆರಡು ಸೇರುವ ಜಾಗದಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ವಿಷ ಹಾಕಿದ ಪರಿಣಾಮ ಪರಿಸರದ ನಾಲ್ಕು ಮಂದಿ ಆಸ್ಪತ್ರೆ ಸೇರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಲ್ಲಿನ ಸ್ಥಳೀಯರಾದ ಗೋಪಾಲ ಗೌಡ ಮತ್ತು ಚಂದ್ರಕಾಂತ ಗೌಡ ಎಂಬವರು ,ಮಾ.18 ರ ಸೋಮವಾರ ಪಲ್ಗುಣಿ ನದಿಯ ನೀರಿನ ಗುಂಡಿಗೆ ಮೈಲುತುತ್ತು ಬೆರೆಸಿ ಮೀನುಗಳನ್ನು ಹಿಡಿದು ನೀರನ್ನು ಕಲುಷಿತ ಗೊಳಿಸಿದ್ದು, ಇದೇ ನೀರನ್ನು ಕುಡಿಯಲು ಹಾಗೂ ಅಡುಗೆಗಾಗಿ ವಾಸು ಮುಗೇರ ಮತ್ತು ಹೆಂಡತಿ ಮಕ್ಕಳು ಬಳಸಿದ ಪರಿಣಾಮ ಮಧ್ಯರಾತ್ರಿ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.