ಕಾರವಾರ,ಮಾ22(AZM): ಸಾಮೂಹಿಕ ಚುನಾವಣಾ ಬಹಿಷ್ಕಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರು ಮುಂದಾಗಿದ್ದಾರೆ.
ಮಲ್ಪೆ ಬಂದರಿನಿಂದ ಡಿ.13ರಂದು ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಹಿತ 7 ಜನ ಮೀನುಗಾರರು ಕಾಣೆಯಾಗಿದ್ದು, ಇವರ ಕುರಿತು ಯಾವುದೇ ರೀತಿಯ ಸುಳಿವು ಲಭ್ಯವಾಗಿಲ್ಲ. ಹಾಗಾಗಿ ಕರಾವಳಿ ಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮೀನುಗಾರರನ್ನು ಹುಡುಕಿಕೊಡಬೇಕೆಂದು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಮನವಿ ನೀಡಿದ್ದರು.
ಆದರೆ ಮೀನುಗಾರರ ಬಗ್ಗೆ ಸಮರ್ಪಕವಾಗಿ ಕ್ರಮಕೈಗೊಳ್ಳದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಸಡ್ಡೆ ತೋರಿದ್ದು, ಪಕ್ಷಾತೀತವಾಗಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರು ತಿಳಿಸಿದ್ದಾರೆ.