ಕಾರ್ಕಳ, ಮಾ 23(MSP): ಕುಕ್ಕುಜೆ ಗ್ರಾಮದ ಬಸಲಕ್ಯಾರು ಎಂಬಲ್ಲಿ ಹಾದು ಹೋಗಿರುವ ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಅಜೆಕಾರು ಪೊಲೀಸರು ಬಂದಿಸಿದ್ದಾರೆ. ಶನಿವಾರ ನಸುಕಿನ ಜಾವದಲ್ಲಿ ಅಜೆಕಾರು ಠಾಣೆಯ ಉಪನಿರೀಕ್ಷಕ ಉಮೇಶ್ ಜಿ. ಪಾವಸ್ಕರ್ ನೇತೃತ್ವದಲ್ಲಿ ಪೊಳಿಸರ ತಂಡವು ಈ ಕಾರ್ಯಚರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕ್ಕುಜೆ ಗ್ರಾಮದ ಬಸಲಕ್ಯಾರು ಮಾತೃಶ್ರೀ ಮನೆಯ ಅಶೋಕ್ ಶೆಟ್ಟಿ (52) ಎಂಬಾತನ್ನು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದ್ದ ಕೆಎ-20-ಬಿ-9706 ನಂಬ್ರದ ಟೆಂಪೋ ವನ್ನು ವಶಪಡಿಸಲಾಗಿದ್ದು ಅದರಲ್ಲಿ ಮರಳು ತುಂಬಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿ ದಾಸ್ತಾನು ಮಾಡಿದ ಮರಳು ರಾಶಿ, ಎರಡು ಹಾರೆ, ಎರಡು ರಬ್ಬರ್ ಬುಟ್ಟಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಮರಳಿನ ಅಂದಾಜು ಮೌಲ್ಯ ರೂ. 10,000 ಆಗಿರುತ್ತದೆ. ವಾಹನದ ಮೌಲ್ಯ ರೂಪಾಯಿ 2,00,00 ಆಗಿರುತ್ತದೆ. ಈ ಕುರಿತು ಆರೋಪಿಯ ವಿರುದ್ಧ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿರುತ್ತದೆ.
ಮರಳು ದಂಧೆಕಾರರಿಗೆ ಎದೆನಡುಕ
ನೂತನವಾಗಿ ಕರ್ತವ್ಯದಲ್ಲಿ ತೊಡಗಿರುವ ಎಎಸ್ಪಿ ಕೃಷ್ಣಕಾಂತ್ ಅವರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ಶಪಥ ತೊಟ್ಟಿದ್ದು, ಅಲ್ಪ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಭೇದಿಸಿ ಹಲವು ಮಂದಿಗೆ ತಕ್ಕಶಾಸ್ತ್ರಿ ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ವಿರುದ್ಧ, ಅಕ್ರಮ ಕರಿಕಲ್ಲು ಕ್ವಾರೇ ವಿರುದ್ಧ, ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ವಿರುದ್ಧ ಕಾರ್ಯಚರಣೆ ನಡೆಸಿದರಲ್ಲದೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಇದರ ಬಗ್ಗೆ ಕಾರ್ಯಚರಣೆ ತೀವ್ರಗೊಳಿಸುವಂತೆ ಠಾಣಾಧಿಕಾರಿಗಳಿಗೆ ಸ್ವಷ್ಟ ಸೂಚನೆ ನೀಡಿರುವುದರಿಂದ ಪೊಲೀಸರು ಅಲ್ಲಲ್ಲಿ ಕಾರ್ಯಚರಣೆ ತೀವ್ರಗೊಳಿಸುತ್ತಿರುವುದು ಕಂಡು ಬಂದಿದೆ. ಅಕ್ರಮ ವ್ಯವಹಾರದಲ್ಲಿ ರಾಜಕರಣಿಗಳೇ ಸಕ್ರಿಯಾ ಗೊಂಡಿರುವುದು ಬಯಲಾಗಿದೆ.