ಬಂಟ್ವಾಳ,ಮಾ23(AZM):ತನ್ನ ಮಗುವಿಗೆ ವಿಷವುಣಿಸಿ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಿ.ಸಿ.ರೋಡಿನಲ್ಲಿ ಮಾ.23ರ ಶನಿವಾರದಂದು ನಡೆದಿದೆ.
ತಂದೆ ಪ್ರಭಾಕರ(45) ಹಾಗೂ ಮಗು ಪ್ರಣಮ್ಯ(12) ಮೃತ ದುರ್ದೈವಿಗಳು. ಬಿ.ಸಿ.ರೋಡಿನ ವಿವೇಕ ನಗರದ ಕೃಷ್ಣಾನಂದಾ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು,ಪ್ರಭಾಕರ ಅವರ ಪತ್ನಿ ಹೇಮಾ ಅವರು ಕೂಡಾ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಎಸ್. ಐ. ಚಂದ್ರಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.