ಪಾಂಡೇಶ್ವರ,ಮಾ23(AZM):ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ವಠಾರದಲ್ಲಿರುವ 7 ಮನೆಗಳು ಭಾಗಶಃ ಬೆಂಕಿಗಾಹುತಿಯಾದ ಘಟನೆ ಪಾಂಡೇಶ್ವರದ ದೂಮಪ್ಪ ಕಂಪೌಂಡ್ ಬಳಿ ನಡೆದಿದೆ.
ಮೊದಲಿಗೆ ಒಂದು ಮನೆಗೆ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆ ಸುತ್ತ ಇರುವ 7 ಮನೆಗಳನ್ನು ಭಾಗಶಃ ಸುಟ್ಟು ಹಾಕಿದೆ. ಅದೃಷ್ಟಾವಶತ್ ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ. ಇವುಗಳನ್ನು ಒಂದು ಮನೆಯಲ್ಲಿ ವಿದ್ಯಾರ್ಥಿನಿಯರು ಪೇನ್ ಗೆಸ್ಟ್ ಗಳಾಗಿ ವಾಸಿಸುತ್ತಿದ್ದು, ಅವರು ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬೆಂಕಿ ಅವಘಡದಿಂದ ಅಪಾರ ಸೊತ್ತು ನಾಶವಾಗಿದೆ.
ಸ್ಥಳಕ್ಕೆ ಪಾಂಡೇಶ್ವರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸ್ಥಳೀಯರು ಸಾತ್ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಶಾಸಕ ವೇದವಾಸ್ ಕಾಮತ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಮನೆಗಳು ಅಶೋಕ್ ಆಚಾರ್ಯ,ಕಾರ್ತಿಕೇಯನ್,ಅಶೋಕ್,ಶೇಖರ್ ಆಚಾರ್ಯ,ಭಾಗ್ಯಶ್ರೀ ಹಾಗೂ ಕೆ.ಆರ್. ಶ್ರೀನಿವಾಸ್ ಅವರಿಗೆ ಒಳಪಟ್ಟದ್ದಾಗಿದೆ.