ಮಂಗಳೂರು,ಮಾ25(AZM):ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಜನರಿಗೆ ಚುನಾವಣೆ ಬಗ್ಗೆ ಮಾಹಿತಿ ಹಾಗೂ ಪೊಲೀಸ್ ಬೀಟ್ ಸಭೆಯು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಇಂದು ನಡೆಯಿತು.
ಸಭೆಯಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯ 100ಕ್ಕೂ ಅಧಿಕ ಸಾರ್ವಜನಿಕರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿ ಸಿದ್ದಗೌಡ ಭಜಂತ್ರಿಯವರು ಮಾತನಾಡಿ, ತನ್ನ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ಮತ್ತು ಸೌಹಾರ್ದ ಜೀವನ ನಡೆಸುವಂತೆ ತಿಳಿಸಿದರು.ಇನ್ನೂ ಈ ಬಾರಿ ಲೋಕಸಭಾ ಚುನಾವಣೆ ಶಾಂತಿಯುತ ವಾಗಿ ನಡೆಸಲು ತಮ್ಮ ವ್ಯಾಪ್ತಿಯ ಜನಸಾಮಾನ್ಯರಿಂದ ಸಲಹೆ ಪಡೆದರು.
ಈ ಹಿಂದಿನ ವಿಧಾನ ಸಭಾ ಚುನಾವಣೆ ವೇಳೆ ಎಲ್ಲಾ ಪ್ರದೇಶದಲ್ಲಿ ಶಾಂತಿ ಮತದಾನ ಮತ್ತು ವಿಜೊತ್ಸವ ನಡೆದಿದ್ದು, ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಡ್ಯಾರ್ ನಲ್ಲಿ ಎರಡು ಧರ್ಮದ ಜನರ ಮಧ್ಯೆ ಪರಸ್ಪರ ಹೊಡೆದಾಟ ನಡೆದು ಶಾಂತಿ ಕೆದಡುವ ಕಾರ್ಯ ನಡೆದಿತ್ತು. ಈ ಹಿನ್ನಲೆ ಈ ಬಾರಿ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದಕ್ಕೆ ಸ್ಥಳೀಯರು ಕೂಡಾ ಉತ್ತಮ ಸಲಹಾ ಸೂಚನೆಯನ್ನು ನೀಡಿದರು.
ಕಾರ್ಯಕ್ರಮ ದಲ್ಲಿ ,ಮಂಗಳೂರು ಗ್ರಾಮಾಂತರ ಠಾಣಾ ಎಸ್ಐ ದೇಜಪ್ಪ, ನಾಗರಾಜ್, ಎಎಸ್ಐ ಹರೀಶ್, ಕುಮಾರೇಶ್, ಇಲಾಖಾ ಸಿಬ್ಬಂದಿ ಮೊಹನ್ ಮತ್ತಿತರರು ಉಪಸ್ಥಿತರಿದ್ದರು.