ಮಂಗಳೂರು, ಮಾ25(SS): ಯೋಗರಾಜ್ ಭಟ್ ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡುವುದು ಸುದೈವ ಎಂದು ನಾಯಕಿ ಸೋನಲ್ ಮೊಂತೆರೋ ಹೇಳಿದ್ದಾರೆ.
ನನ್ನ ವೃತ್ತಿ ಬದುಕಿಗೆ ಪಂಚತಂತ್ರ ಸಿನಿಮಾ ಒಂದೊಳ್ಳೆಯ ತಿರುವು ನೀಡಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಎನಗೆ ವಿಶ್ವಾಸವಿದೆ. ಯೋಗರಾಜ್ ಭಟ್ ಅವರ ಬಳಿ ತುಂಬಾ ಕಲಿತಿದ್ದೇನೆ. ಸಂಭಾಷಣೆ ಹೇಳುವ ರೀತಿ, ದೈಹಿಕ ಭಾಷೆ ಇತ್ಯಾದಿ ಈ ಚಿತ್ರದಿಂದಲೇ ಅನುಭವಕ್ಕೆ ಬಂದದ್ದು ಎಂದು ತಿಳಿಸಿದ್ದಾರೆ.
ಯೋಗರಾಜ್ ಭಟ್ ಅವರ ಈ ಚಿತ್ರ ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಚಿತ್ರದಲ್ಲಿ ರೇಸಿಂಗ್, ರೊಮ್ಯಾಂಟಿಕ್ , ಮುಗ್ಧತೆ ಮತ್ತು ತುಂಟತನ ಎಲ್ಲವೂ ಸೇರಿದ ಸಾಹಿತ್ಯ ಎಂಬ ಹುಡುಗಿಯ ಹೆಸರಿನ ಪಾತ್ರ ನನ್ನದು. ಶೃಂಗಾರದ ಹೊಂಗೆಮರ ಗೀತೆ ಬಹಳ ಅದ್ಭುತವಾಗಿ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಚಿತ್ರದ ಬಳಿಕ ಯೋಗರಾಜ್ ಭಟ್ ಅವರ ಗಾಳಿಪಟ-2 ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಕೂಡ ಸೋನಲ್ ಅವರಿಗೆ ಸಿಕ್ಕಿದೆ. ಸೋನಾಲ್ ಮೊಂತೆರೋ ತುಳು ಭಾಷೆಯ ಚಿತ್ರಗಳಿಂದ ತಮ್ಮ ವೃತ್ತಿ ಬದುಕು ಆರಂಭಿಸಿ, ಈ ಹಿಂದೆ ಕನ್ನಡದ ಕೆಲವೊಂದು ಸಣ್ಣ ಚಿತ್ರಗಳಲ್ಲಿ ಅಭಿನಯಿಸಿದ್ದರು.