ಬಂಟ್ವಾಳ ನ 05: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವ್ರದ್ದಿ ಸಂಘ ರಾಜ್ಯ ಸಮಿತಿ, ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಸಮಾಲೋಚನೆ ಸಭೆ ಹಾಗೂ ದ.ಕ.ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಸಹಾಯಕ ಕಮೀಶನರ್ ಎಸಿ ರೇಣುಕಾ ಪ್ರಸಾದ್ ಮಾತನಾಡಿ ಸೌಮ್ಯ ರೀತಿಯ ನಿಮ್ಮ ಹೋರಾಟ ನಿಜಕ್ಕೂ ಶ್ಲಾಘನೀಯ. ಸಂಘಟಿತರಾಗಿ ಕೆಲಸ ಮಾಢಿ ಸಾಧನೆ ತೋರಿಸಿದರೆ ಅದು ಹೆಚ್ಚು ಪ್ರಭಾವ ಬೀರುತ್ತದೆ. ಕ್ರಿಯಾಶೀಲ ರಾದ ಸಂಘದ ಅದ್ಯಕ್ಷ ದೇವಿಪ್ರಸಾದ್ ಬೊಲ್ಮ ಹೋರಾಟಕ್ಕೆ ಸೂಕ್ತ ವ್ಯಕ್ತಿ. ಅವಕಾಶಗಳನ್ನು ಬಳಸಿಕೊಂಡು ಸಂಘಟಿತರಾಗಿ ಹೋರಾಟ ಮಾಡಿ . ನಿಮ್ಮ ಹೋರಾಟಕ್ಕೆ ಪರೋಕ್ಷವಾಗಿ ನಾನು ಬೆಂಬಲಿಸುತ್ತೆನೆ ಎಂದು ತಿಳಿಸಿದರು.
ಜಿಲ್ಲಾ ಅದ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಗ್ರಾಮ ಪಂಚಾಯತ್ ನೌಕರರು ನಿರಾಶವಾದಿಗಳಾಗದೆ ಆಶಾವಾದ ದ ಜೊತೆ ಸಂಘ ಸಂಸ್ಥೆಯಲ್ಲಿ ಹೋರಾಟ ಮಾಡಿ. ಯಶಸ್ಸು ಸಿಗುತ್ತದೆ ಎಂದರು.
ಕಾರ್ಯಕ್ರಮದ ಅದ್ಯಕ್ಫತೆ ವಹಿಸಿ ಮಾತನಾಡಿದ ಗ್ರಾ.ಪಂ.ನೌಕರರ ರಾಜ್ಯ ಸಂಘದ ಅದ್ಯಕ್ಷ ದೇವಿಪ್ರಸಾದ್ ಬೊಲ್ಮ ವ್ಯವಸ್ಥೆ ಯ ವಿರುದ್ದ ಪ್ರತಿಭಟನೆ ಮಾಡದೆ ಅದರ ಬದಲು ಅಧಿಕಾರಿಗಳ ಜೊತೆ ಮತ್ತು ಸಚಿರುಗಳ ಜೊತೆ ಸೇರಿ ಚರ್ಚೆ ನಡೆಸಿ , ಸಮಸ್ಯೆ ಯ ಬಗ್ಗೆ ಅವರಲ್ಲಿ ಮುಕ್ತವಾಗಿ ಮಾತನಾಡಿ ಬಗೆಹರಿಸುವ ಕೆಲಸ ಈ ವರೆಗೆ ಮಾಡುತ್ತಾ ಬಂದಿದ್ದೇವೆ . ಆದರೆ ಸರಕಾರ ಸೂಕ್ತವಾದ ಸ್ಪಂದನೆ ನೀಡದೆ ಹೋದರೆ ನಾವೂ ಬೇರೆ ರೀತಿಯ ಹೋರಾಟ ಮಾಡಬೇಕಾಗಿದೆ ಎಂದರು. ಸರಕಾರದ ಸವಲತ್ತುಗಳನ್ನು ನಮ್ಮ ಬೇಡಿಕೆಗಳನ್ನು ಪಡೆಯಲು ಬೇಕಾದ ವ್ಯವಸ್ಥೆ ಗಳನ್ನು ಸಂಘಟನೆಯ ಮೂಲಕ ಒಗ್ಗಟಾಗಿ ಮಾಡೋಣ ಎಂದು ಅವರು ಸದಸ್ಯರಿಗೆ ತಿಳಿಸಿದರು.
ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.