ಉಡುಪಿ, ಮಾ26(SS): ನರರದ ಮಲ್ಪೆ ಬಂದರಿನಲ್ಲಿ ಮೀನುಗಾರರೊಂದಿಗೆ 'ನಾನು ಮತ್ತು ನನ್ನ ಮತ ಮಾರಾಟಕ್ಕಲ್ಲ’ ಎನ್ನುವ ಮತದಾರರ ಜಾಗೃತಿ ಕಾರ್ಯಕ್ರಮ ನಡೆದಿದ್ದು, ಈ ಮೂಲಕ ಮಹಿಳಾ ಮೀನುಗಾರರು ಮತದಾನದ ಬಗ್ಗೆ ಸಂದೇಶ ಸಾರಿದ್ದಾರೆ.
ಮಲ್ಪೆ ಬಂದರಿನಲ್ಲಿ ಸುಮಾರು 400ಕ್ಕೂ ಹೆಚ್ಚು ಮೀನುಗಾರರು 'ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ' ಎನ್ನುವ ಬ್ಯಾಡ್ಜ್ಗಳನ್ನು ಪಡೆದು ಹೆಮ್ಮೆಯಿಂದ ಧರಿಸಿ ತಮ್ಮ ಜಾಗೃತಿಯನ್ನು ಪ್ರದರ್ಶಿಸಿದರು. ಜೊತೆಗೆ, ನಾವು ಇಲ್ಲಿಯವೆರೆಗೂ ಹಣ ಪಡೆದು ವೋಟ್ ಮಾಡಿಲ್ಲ. ಒಮ್ಮೆಯೂ ಮತದಾನವನ್ನು ತಪ್ಪಿಸಿಕೊಂಡಿಲ್ಲ. ಈ ಬಾರಿಯೂ ಏನೇ ಕೆಲಸವಿದ್ದರೂ ಸಹ ವೋಟ್ ಮಾಡುತ್ತೇವೆ ಎಂದು ಮೀನುಗಾರ ಮಹಿಳೆಯರು ತಿಳಿಸಿದರು.
ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ. ನನ್ನ ಮತ - ನನ್ನ ಹಕ್ಕು ಮುಂತಾದ ಸ್ಟಿಕ್ಕರ್ಗಳನ್ನು, ಬ್ಯಾಡ್ಜ್ಗಳನ್ನು ಹಾಗೂ ಮತದಾನದ ಮಹತ್ವವನ್ನು ಸಾರುವ ಪೋಸ್ಟರ್ಗಳೊಂದಿಗೆ ಸಂಘಟನೆಗಳ ಕಾರ್ಯಕರ್ತರು ಮೀನುಗಾರರನ್ನು ಭೇಟಿಯಾಗಿ ಅವರೊಂದಿಗೆ ಮತದಾನದ ಪಾವಿತ್ರ್ಯ ಅದರ ಮಹತ್ವ ಹಾಗೂ ಮತದಾನ ಹೇಗಿರಬೇಕು ಎನ್ನುವ ವಿಷಯದ ಕುರಿತು ಮಾತುಕತೆ ನಡೆಸಿದರು.
ಈ ವೇಳೆ 100ಕ್ಕೂ ಹೆಚ್ಚು ವಾಹನಗಳ ಮಾಲೀಕರು, ಚಾಲಕರು ಸ್ಟಿಕ್ಕರ್ಗಳನ್ನು ಕೇಳಿ ಪಡೆದು ತಮ್ಮ ವಾಹನಗಳಿಗೆ ಅಂಟಿಸಿಕೊಂಡರು.