ಉಡುಪಿ, ಮಾ26(SS): . ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ…? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ..? ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗರೀಬಿ ಹಠಾವೋ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮವಾಗಿದ್ದು ಇಂದಿರಾ ಗಾಂಧಿ 1971ರಲ್ಲಿ ಅಭಿಯಾನವನ್ನು ಆರಂಭಿಸಿದರು. ಇನ್ನೂ ಅದೇ ಘೋಷಣೆಯನ್ನು ರಾಹುಲ್ ಹೇಳುತ್ತಿದ್ದು, ಬಡತನ ಭಾರತದಲ್ಲಿ ಇನ್ನೂ ಇರಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.
ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಲು ವಿಜಯ ಸಂಕಲ್ಪಯಾತ್ರೆಗೆ ಬಂದಿದ್ದೇನೆ. ಮೋದಿ ಸರ್ಕಾರದ ಯೋಜನೆಗಳನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿದ್ದಾರೆ. ಹೀಗಾಗಿ ಅವರ ಪುನರ್ ಆಯ್ಕೆಗೆ ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ ವಿರುದ್ಧ ಮಹಾಘಟಬಂಧನ್ ಸ್ಥಾಪನೆಯಾಗಿದೆ. ನಾವು ಐದು ವರ್ಷ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದೇವೆ. ಎನ್ಡಿಎ ಜೊತೆ ಘಟಬಂಧನ್ ಹೋಲಿಕೆ ಮಾಡಬೇಡಿ. ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ..? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ…? ಎಂದು ಪ್ರಶ್ನಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ, ಅದನ್ನ ರಾಹುಲ್ ಕೂಡ ಹೇಳಿಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಏನೇ ಆರೋಪ ಮಾಡಲಿ. ಬಿಜೆಪಿ ಟಿ ಶರ್ಟ್, ಆಪ್ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ..? ಇಂತಹದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಸವಾಲ್ ಹಾಕಿದರು.