ಬಂಟ್ವಾಳ,ಮಾ26(AZM):ಆಕಸ್ಮಿಕವಾಗಿ ಫ್ಯಾನ್ಸಿ ಅಂಗಡಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಮಾಣಿಯಲ್ಲಿಂದು ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆ ಧರ್ಣಪ್ಪ ಬರಿಮಾರು ಎಂಬವರ ಫ್ಯಾನ್ಸಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ.ಧರ್ಣಪ್ಪ ಅವರು ಸಾಮಾನು ತರಲೆಂದು ಪುತ್ತೂರು ಕಡೆಗೆ ಹೋಗಿ ವಾಪಾಸ್ಸಾಗುವ ವೇಳೆ ಅಂಗಡಿ ಬೆಂಕಿಗೆ ಅಹುತಿಯಾಗಿತ್ತು. ಅಂಗಡಿಗೆ ವಿದ್ಯುತ್ ಸಂಪರ್ಕ ಕೂಡಾ ಇಲ್ಲ . ಆದರೆ ಯಾವ ರೀತಿಯಲ್ಲಿ ಅಂಗಡಿಗೆ ಬೆಂಕಿ ತಗುಲಿದೆ ಎಂಬುದು ಇನ್ನೂ ಅಸ್ಪಷ್ಟ ವಾಗಿದೆ.
.ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಭೇಟಿ ನೀಡಿದ್ದಾರೆ.ವಿಟ್ಲ ಠಾಣಾ ಪೋಲೀಸರು ಸ್ಥಳ ಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.