ಉಡುಪಿ, ಮಾ 26(SM): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿದ್ದ ಆಸ್ತಿ ವಿವರ ಇದೀಗ ಲೋಕಸಮರದ ಸಂದರ್ಭದಲ್ಲಿ ಹೆಚ್ಚಾಗಿದೆ. ಹಿಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ನಾಮಪತ್ರದ ಅಫಿದಾವಿಟ್ನ ಘೋಷಣೆ ಹಾಗೂ ಇಂದಿನ ಘೋಷಣೆಯಲ್ಲಿನ ಆಸ್ತಿಯ ಮೌಲ್ಯದ ವೃದ್ಧಿಗೆ ಕಾರಣಗಳನ್ನು ಪ್ರಮೋದ್ ಮಧ್ವರಾಜ್ ಬಹಿರಂಗ ಪಡಿಸಿದ್ದಾರೆ.
ಸ್ಥಿರಾಸ್ತಿಯ ಅಂದಾಜು ಪ್ರಸ್ತುತ ಮಾರುಕಟ್ಟೆ ದರದಲ್ಲಿ ಏರಿಕೆಯಾಗಿರುವುದರಿಂದ ಸುಮಾರು 1.26 ಕೋಟಿ ರೂಪಾಯಿಗಳಷ್ಟು ಮೌಲ್ಯವು ಏರಿಕೆಯಾಗಿದೆ. ಷೇರು ಹೂಡಿಕೆಗಳ ಮೌಲ್ಯವನ್ನು ಮಾರಾಟಗಾರನಿಗೆ ಲಾಭ ರಹಿತವಾಗಿ ನಮೂದಿಸಲಾಗಿದೆ. ಹಿಂದಿನ ಬಾರಿ ಇದರ ಮೌಲ್ಯವನ್ನು ಮಾರುಕಟ್ಟೆ ದರದಲ್ಲಿ ನಮೂದಿಸಲಾಗಿತ್ತು.
ಇದರಲ್ಲಿ ಸುಮಾರು 5.05 ಕೋಟಿ ರೂಪಾಯಿಯಷ್ಟು ಮೌಲ್ಯದ ವ್ಯತ್ಯಾಸವು ಇರುತ್ತದೆ. ಎಲ್ಲಾ ಅಂಕಿ ಅಂಶಗಳನ್ನು ಅಫಿದಾವಿಟ್ನ ಆಯಾಯ ಕಂಡಿಕೆಗಳಲ್ಲಿ ವಿವರಿಸಲಾಗಿದೆ. ಇತರ ಆಸ್ತಿಗಳ ಮೌಲ್ಯವನ್ನು ಕಳೆದ ವರ್ಷ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ನಾಮಪತ್ರದ ಅಫಿದಾವಿಟ್ನ ಅಂಕಿ ಅಂಶಗಳಿಗೆ ಹೋಲಿಸಿದರೆ 2.37 ಕೋಟಿ ರೂಪಾಯಿಯಷ್ಟು ಮೌಲ್ಯದ ವ್ಯತ್ಯಾಸವಿದೆ.
ಇದಕ್ಕೆ ಮೂಲ ಕಾರಣ ಕೆಳೆದ ವರ್ಷ ವಿಧಾನಸಭಾ ಕ್ಷೇತ್ರದ ನಾಮಪತ್ರದ ಅಫಿದಾವಿಟ್ನಲ್ಲಿ ಆಸ್ತಿಯ ಮೌಲ್ಯಗಳನ್ನು ಪ್ರೊವಿಷನಲ್ ಆರ್ಥಿಕ ತಖ್ತೆಗಳ ಪ್ರಕಾರ ಸಲ್ಲಿಸಿರುತ್ತೇನೆ. ಈ ಸಲದ ಅಂಕಿ ಅಂಶಗಳನ್ನು ಅಕ್ಟೋಬರ್,2018ರಲ್ಲಿ ಪಡೆದ ಲೆಕ್ಕ ಪರಿಶೋಧನಾ ತಖ್ತೆಗಳ ಪ್ರಕಾರ ಸಲ್ಲಿಸಲಾಗಿದೆ. ನನ್ನ ಎಲ್ಲಾ ಆಸ್ತಿಯ ಮೌಲ್ಯಗಳು ಅಫಿದಾವಿಟ್ನ ಆಯಾಯ ಕಂಡಿಕೆಗಳಲ್ಲಿ ಲಭ್ಯವಿರುತ್ತದೆ ಎಂದಿದ್ದಾರೆ.