ಉಡುಪಿ,ಮಾ26(AZM):ಕೆಲವು ದಿನಗಳಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಮಹಿಳೆಯೋರ್ವರು ಇಂದು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾಣಮ್ಮ(60) ಮೃತಪಟ್ಟ ವೃದ್ದೆ ಮಹಿಳೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 314 ಜನರು ಇಲ್ಲಿಯವರೆಗೆ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಮತ್ತೆ ಜ್ವರ ಮರುಕಳಿಸಿದರಿಂದ 12 ಜನರು ಆಸ್ಪತ್ರೆಗೆ ಮರು ಸೇರ್ಪಡಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಸುಮಾರು 129 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 185 ಜನರಿಗೆ ಮಂಗನ ಕಾಯಿಲೆ ಇರದ ಬಗ್ಗೆ ವರದಿಯಾಗಿದೆ. ಇದರಲ್ಲಿ 283 ಜನ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 31 ಜನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಇಲ್ಲಿಯವರೆಗೆ 9 ರೋಗಿಗಳು ಮರಣವಾದ ಬಗ್ಗೆ ವರದಿಯಾಗಿದೆ.