ಮಂಗಳೂರು,ಮಾ26(AZM): ಪೊಲೀಸ್ ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ಜೀಪ್ ಚಲಾಯಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಇಂದು ನಡೆದಿದೆ.
ಕುಡಿದು ವಾಹನ ಚಲಾಯಿಸಿದ ಪೊಲೀಸ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ತನ್ನ ಜೀಪನ್ನು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಠಾವಶತ್ ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ ಈ ವೀಡಿಯೋವನ್ನು ಅಲ್ಲಿ ನೆರೆದಿದ್ದ ಸಾರ್ವಜನಿಕರು ಚಿತ್ರೀಕರಿಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕುಡಿದು ವಾಹನ ಚಲಾಯಿಸಬಾರದು ಎಂಬ ನಿಯಮ ಸಾರ್ವಜನಿಕರಿಗೆ ಮಾತ್ರವಲ್ಲ.ನಿಯಮ ಪಾಲಿಸಬೇಕಾದ ನಿಯಮ ಪಾಲಕರೇ ನಿಯಮ ಉಲ್ಲಂಘನೆ ಮಾಡಿದರೆ ಸಾಮಾನ್ಯ ಜನರ ಪಾಡೇನು?