ಉಡುಪಿ, ಮಾ 27(MSP): ಲಾಡ್ಜೊಂದರಲ್ಲಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪದಲ್ಲಿ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಿತ್ತೂರಿನ ಜಗದೀಶ್ ಬೋವಿ (24) ಮತ್ತು ಹಿರಿಯಡ್ಕದ ಗಣೇಶ್ ಮಲ್ಯ(35) ಎಂದು ಗುರುತಿಸಲಾಗಿದೆ.
ವಿವಾಹವಾಗುವುದಾಗಿ ನಂಬಿಸಿದ ಪ್ರೇಮಿಯು ಮಾ.17 ರಂದು ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಆತನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಲ್ಪೆಯ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಉಡುಪಿ ಬಡಗುಪೇಟೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಲ್ಪೆ ಯುವತಿಯೊಂದಿಗೆ ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಾರಣಕಟ್ಟೆಯ ಜಗದೀಶ್ ಬೋವಿ ಮದುವೆಯಾಗುವುದಾಗಿ ನಂಬಿಸಿ ಸಲುಗೆಯಲ್ಲಿ ವರ್ತಿಸುತ್ತಿದ್ದ. ಆ ಬಳಿಕ ಜಗದೀಶ್ ಪೆಡೂರು ಜಾತ್ರೆಯ ವೇಳೆ ತನ್ನ ಸ್ನೇಹಿತ ಗಣೇಶ್ ಮಲ್ಯನೊಂದಿಗೆ ಮಣಿಪಾಲದ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಗೈದಿದ್ದಾನೆ. ಪ್ರೇಮಿಸಿ ಮದುವೆಯಾಗುವುದಾಗಿ ನಂಬಿಸಿದ ಜಗದೀಶ್ ಬಳಿಕ ಮದುವೆ ನಿರಾಕರಿಸಿದ ಹಿನ್ನಲೆಯಲ್ಲಿ ಮನನೊಂದ ಯುವತಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು , ಯುವತಿ ತಾಯಿ ಆಕೆಯನ್ನು ಉಡುಪಿ ಜಿಲ್ಲಾ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ, ಯುವತಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅತ್ಯಾಚಾರ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದ ,ನ್ಯಾಯಲವು 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.