ಮಂಗಳೂರು, ಮಾ 27(MSP): ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು, 62,700 ನಗದು ಮತ್ತು ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಭಾನುಪ್ರಕಾಶ್ ಶೆಟ್ಟಿ, ಜೇಮ್ಸ್, ಅನಿಲ್ರಾಜ್ ಬಂಧಿತರು. ಐಪಿಎಲ್ ಕ್ರಿಕೆಟ್ ಪಂದ್ಯಾಟದ ಸಮಯದಲ್ಲಿ ಬೆಟ್ಟಿಂಗ್ ದಂಧೆ ನಡೆಸಲು ಆರೋಪಿಗಳು ಬಿಜೈ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಅದರಲ್ಲಿ ಟಿ.ವಿ. ಇರಿಸಿಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ಬೆಟ್ಟಿಂಗ್ ವ್ಯವಹಾರ ಮಾಡುತ್ತಿದ್ದರು.
ಬೆಟ್ಟಿಂಗ್ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು, ಕೊಠಡಿ ಮೇಲೆ ದಾಳಿ ನಡೆಸಿ 3 ಮಂದಿ ಬಂಧಿಸಿದ್ದಾರೆ. ಆರೋಪಿ ಗಳಲ್ಲಿ ಭಾನುಪ್ರಕಾಶ್ ಎಂಬಾತ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಇರುವ ನೆಟ್ವರ್ಕ್ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದು, ಜೇಮ್ಸ್ ಭದ್ರತಾ ಸಿಬ್ಬಂದಿ ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಪಿ ಶ್ರೀನಿವಾಸ ಗೌಡ, ಸಿಸಿಬಿ ಸಬ್ ಇನ್ಸ್ಪೆಕ್ಟರ್ ಕಬ್ಬಾಳ್ರಾಜ್, ಕಾನ್ಸ್ಟೆಬಲ್ಗಳಾದ ರಾಜಾ, ಆಶಿತ್, ಮಣಿ ಪಾಲ್ಗೊಂಡಿದ್ದರು.