ಮಂಗಳೂರು,ಮಾ26(AZM):ಕೇರಳದ ಕೊಯಿಲಾಂಡಿ ಹಾಗೂ ಮಂಗಳೂರಿನಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಇಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅನಿಲ್ ಕುಮಾರ್( 28), ವಿರೇಂದ್ರಶೆಟ್ಟಿ(46), ಹಾಗೂ .ಅಬ್ದುಲ್ ರಹೀಂ(42) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕೇರಳದ ಕೋಯಿಲಾಂಡಿ ಹಾಗೂ ಮಂಗಳೂರಿನ ಕುಲಶೇಖರದಿಂದ ಕಳವು ಮಾಡಿದ ಚಿನ್ನಾಭರಣ, ಟಿವಿ, ತಾಮ್ರದ ಪಾತ್ರೆಗಳು ಸೇರಿದಂತೆ ಸುಮಾರು 4,40,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಅನಿಲ್ ಕುಮಾರ್ ಎಂಬಾತನ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಉಡುಪಿ ನಗರ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಕ್ಯಾಲಿಕಟ್ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ 01 ಕಳ್ಳತನ ಪ್ರಕರಣ ದಾಖಲಾಗಿದೆ.
ವಿರೇಂದ್ರಶೆಟ್ಟಿ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 01 ಕೊಲೆಯತ್ನ ಪ್ರಕರಣ, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 01 ದರೋಡೆ ಪ್ರಕರಣ ದಾಖಲಾಗಿದೆ.
.ಅಬ್ದುಲ್ ರಹೀಂ, ಎಂಬಾತನ ಮೇಲೆ ಉತ್ತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ , ಬರ್ಕೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಗಾಂಜಾ ಪ್ರಕರಣ ಹಾಗೂ 2017 ನೇ ಸಾಲಿನ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಾಗಿದೆ.