ಕುಂದಾಪುರ ನ 06: ಕ್ಷುಲಕ ಕಾರಣವೊಂದು ಸುಖಿ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಘಟನೆ ಇಲ್ಲಿನ ಹೊಸಂಗಡಿಯ ಕೆಪಿಟಿಸಿಎಲ್ ವಸತಿ ಗೃಹದಲ್ಲಿ ನಡೆದಿದೆ. ಕೌಟುಂಬಿಕ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ಕಲಹವುಂಟಾಗಿದ್ದು ಈ ವಿಚಾರವಾಗಿ ಈಶ್ವರ್ ಗೌಡ ಎಂಬಾತ ಮನನೊಂದು ಮನೆಯ ಬಾತ್ ರೂಂನ ಮೆಲ್ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯ ಕಂಡ ಈಶ್ವರ್ ಪತ್ನಿ ವಿನಂತಿ ಆಘಾತಗೊಂಡು ಮಗುವಿನ ಆಟದ ಜೋಕಾಲಿಗೆ ನೇಣು ಬಿಗಿದು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿನಂತಿಯನ್ನು ಕಂಡು ಪಕ್ಕದ ಮನೆಯ ಮಹಿಳೆ ಅಘಾತಗೊಂಡರೂ ರಕ್ಷಿಸಿ , ನೆರೆಹೊರೆಯವರ ಸಹಾಯದಿಂದ ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವಿನಂತಿ ಹಾಗೂ ಮೃತ ಈಶ್ವರ ದಂಪತಿಗೆ ೮ ತಿಂಗಳ ಮಗುವಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.