ಕಾಪು,ಮಾ 28(MSP): ವಿದ್ಯುತ್ ಟ್ರಾನ್ಸ್ಪಾರ್ಮಾರ್ ಸುತ್ತಲೂ ಬೆಳೆದ ಮುಳ್ಳು ಪೊದೆಗಳನ್ನು ತೆರವುಗೊಳಿಸದ ಪರಿಣಾಮ ವಿದ್ಯುತ್ನ ಕಿಡಿ ಹಾರಿ ಆಕಸ್ಮಿಕ ಬೆಂಕಿ ಸಂಭವಿಸಿದ ಪರಿಣಾಮ, ಕಾಪು ಕೊತಲ ಕಟ್ಟೆ ಬಳಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ.
ಈ ಬಗ್ಗೆ ಮಾತನಾಡಿದ ಹಿರಿಯರಾದ ಪುಂಡರೀಕ ಮರಾಠೆ ಎಂಬವರು, ಮೆಸ್ಕಾಂ ಇಲಾಖೆಯು ಪ್ರತಿ ವಾರ ವಿದ್ಯುತ್ ಲೈನ್ ಸಮಗ್ರ ನಿರ್ವಾಹಣೆಗಾಗಿ ವಿದ್ಯುತ್ ಕಡಿತಗೊಳಿಸುತ್ತೆ, ಆದರೆ ಕೇವಲ ರಸ್ತೆಯ ಪಕ್ಕದ ಕೆಲವೊಂದು ಮರಗಳ ರೆಂಬೆಗಳನ್ನು, ತೆಂಗಿನ ಗರಿಗಳನ್ನು ಕಡಿದು ಹಾಕಿ ಹೋಗುವುದೇ ಲೈನ್ ನಿರ್ವಾಹಣೆ ಎಂದು ಭಾವಿಸಿದಂತಿದೆ. ಪ್ರಮುಖವಾಗಿ ವಿದ್ಯುತ್ ತಂತಿಗಳನ್ನು ಸುತ್ತುತ್ತಿರುವ ಅಪಾಯಕಾರಿ ಬಳ್ಳಿಗಳನ್ನಾಗಲಿ, ವಿದ್ಯುತ್ ಟ್ರಾನ್ಸ್ಪಾರ್ಮಾರ್ ಅಡಿಭಾಗದಲ್ಲಿ ಬೆಳೆದ ಮುಳ್ಳು ಪೊದೆಗಳನ್ನಾಗಲೀ ತೆರವುಗೊಳಿಸುವ ಗೌಜಿಗೆ ಹೋಗುತ್ತಿಲ್ಲ, ಅದರ ಪರಿಣಾಮವಾಗಿಯೇ ಆ ಮುಳ್ಳುಪೊದೆಗಳು ಒಣಗಿ ಅದಕ್ಕೆ ಬೆಂಕಿ ಹತ್ತಿಕೊಂಡು ಅಪಾಯದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರ ಕೈಗೊಳ್ಳುವ ಮೂಲಕ ಮತ್ತಷ್ಟು ಸಮಸ್ಯೆ ಸೃಷ್ಠಿಯಾಗದಂತೆ ನೋಡ ಬೇಕಾಗಿದೆ ಎಂದರು.