ಮಂಗಳೂರು,ಮಾ28(AZM):ಆರ್ ಸಿ ಬಿ ತಂಡ ಇಂದು ಹಾಕಿದ ಟ್ವೀಟ್ ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ ಐಪಿಎಲ್ ಬೆಟ್ಟಿಂಗ್ ದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಆರ್ ಸಿ ಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಐಪಿ ಎಲ್ ಮ್ಯಾಚ್ ಗಾಗಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಈ ಹಿನ್ನಲೆ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಆರ್ ಸಿ ಬಿ ತಂಡ ಟ್ವೀಟ್ ಮೂಲಕ ಪ್ರಚುರಪಡಿಸಿದೆ. ಈ ಟ್ವೀಟ್ ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ ಐಪಿಎಲ್ ಬೆಟ್ಟಿಂಗ್ ದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಮಾರ್ಚ್ 22 ರಂದು ಬೆಟ್ಟಿಂಗ್ ನಲ್ಲಿ ತೊಡಗದಂತೆ ಕಮಿಷನರ್ ಎಚ್ಚರಿಕೆ ನೀಡಿದ್ದರು. ಈಗ ಮತ್ತೆ ಟ್ವೀಟ್ ಮಾಡಿ ಆರ್ ಸಿಬಿ ಗೆ ಟ್ಯಾಗ್ ಮಾಡಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಮಾರ್ಚ್ ೨೬ರಂದು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿತ್ತು. ಟ್ವೀಟ್ ಮೂಲಕ ಹಲವಾರು ವಿಚಾರಗಳನ್ನು ಮಂಗಳೂರು ಕಮಿಷನರ್ ಹಂಚಿಕೊಳ್ಳುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.