ಮಂಗಳೂರು, ನ 6:ಕಳೆದ ವರ್ಷ ಉರಿ ಸೇನಾನೆಲೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳೊಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಇನ್ನು ಕೂಡಾ ಜನಮಾನಸದಿಂದ ಮರೆಯಾಗಿಲ್ಲ. ಇದರಲ್ಲಿ ಭಾಗಿಯಾದ ಯೋಧ ಸಂತೋಷ್ ಕುಮಾರ್ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಮುಡಿಪು ಕೊಡಕಲ್ಲಿನ ತನ್ನ ನಿವಾಸಕ್ಕೆ ಆಗಮಿಸಿದ್ದರು. ಆದರೆ ದುರಾದೃಷ್ಟವಾತ್ ಇವರಿಗೆ ನ 5 ರಂದು ಬಾನುವಾರ ರಾತ್ರಿ ಹಾವು ಕಡಿತಕ್ಕೆ ಒಳಗಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣವೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಆಗಲೇ ಸೇನಾ ಯೋಧನ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿದ್ದು, ವೈದ್ಯರು ಆತನಿಗೆ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ 10 ಇಂಜಕ್ಷನ್ಗಳ ಅಗತ್ಯವಿದೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಅಸಹಾಯಕರಾದ ಸಂತೋಷ್ ಕುಟುಂಬಸ್ಥರು ರಾತ್ರಿ 1.15 ಗಂಟೆಗೆ ನೇರವಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಅವರಿಗೆ ಕರೆ ಸಹಾಯಕ್ಕಾಗಿ ಯಾಚಿಸಿದ್ದರು. ಆದರೆ ತಡ ಮಾಡದೇ ಸ್ಪಂದಿಸಿದ ಸಚಿವ ಯು.ಟಿ. ಖಾದರ್ ತಕ್ಷಣವೇ ರಾತ್ರಿ 1.30 ಕ್ಕೆ ಆಸ್ಪತ್ರೆಗೆ ಧಾವಿಸಿ ವೈದ್ಯರೊಂದಿಗೆ ಸಮಾಲೋಚಿಸಿ, ವೆನ್ಲಾಕ್ ಆಸ್ಪತ್ರೆಯಿಂದ ಚುಚ್ಚುಮದ್ದು ತರಿಸುವ ಏರ್ಪಾಡು ಮಾಡಿದ್ದಾರೆ . ಸೂಕ್ತ ಚಿಕಿತ್ಸೆ ಸಕಾಲದಲ್ಲಿ ದೊರೆತ ಕಾರಣ ಸಂತೋಷ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ.ಸೋಮವಾರ ಬೆಳಿಗ್ಗೆಯೂ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ, ಸಂತೋಷ್ ಆರೋಗ್ಯ ಸ್ಥಿತಿ ವಿಚಾರಿಸಿದರು.