ಮಂಗಳೂರು, ಮಾ 29(SM): ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿರುವ ಬಸ್ಸುಗಳ ವಿರುದ್ದ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ. ಶುಕ್ರವಾರದಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು 182 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಹಾಗೂ 18,800 ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಂಚಾರಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳ ಪೈಕಿ ಕರ್ಕಶ ಹಾರ್ನ್ ಬಳಸಿದವರ ವಿರುದ್ದ 48 ಪ್ರಕರಣಗಳು, ಎಲ್ಲೆಂದರಲ್ಲಿ ಬಸ್ ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಕುರಿತು 15 ಪ್ರಕರಣಗಳು, ಪ್ರಯಾಣಿಕರಿಗೆ ಟಿಕೇಟ್ ನೀಡದೇ ಇರುವ ಕುರಿತು 47 ಪ್ರಕರಣಗಳು, ಸಮವಸ್ತ್ರ ಧರಿಸದೇ ಬಸ್ಸುನ್ನು ಚಲಾಯಿಸುವವರ ವಿರುದ್ದ 16 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಇತರೆ 56 ಪ್ರಕರಣವನ್ನು ದಾಖಲಿಸಲಾಗಿದೆ.