ಬಂಟ್ವಾಳ, ನ 07 : ಆಟವಾಡಲು ನದಿ ಬಳಿ ತೆರಳಿದ್ದ ಐವರು ಬಾಲಕರು ನೀರುಪಾಲದ ಘಟನೆ ಬಂಟ್ವಾಳದ ಮುಲಾರಪಟ್ನದಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಶುಂಠಿಹಿತ್ಲು ನಿವಾಸಿಗಳಾದ ಅಸ್ಲಾಮ್, ರಮೀಜ್, ಅಜಮಾತ್, ಮುಭಾಶಿರ್, ಸಮಾದ್ ಎಂದು ಗುರುತಿಸಲಾಗಿದೆ. ಇದರಲ್ಲಿ ಓರ್ವ ಬಾಲಕ ಶವ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಇನ್ನುಳಿದ ನಾಲ್ವರಿಗೆ ಶೋಧ ಕಾರ್ಯ ಮುಂದುವರಿದಿದೆ. ನ 6 ರ ಸೋಮವಾರ ಕನಕ ಜಯಂತಿ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಐವರು ಒಟ್ಟು ಸೇರಿ ಸಮೀಪದ ಫಲ್ಗುಣಿ ನದಿಗೆ ಆಟಕ್ಕೆಂದು ತೆರಳಿದ್ದರು. ಮಧ್ಯಾಹ್ನ ತೆರಳಿದ್ದ ಮಕ್ಕಳು ರಾತ್ರಿಯಾದರೂ ಮನೆಗೆ ವಾಪಸ್ಸಾದ ಹಿನ್ನೆಲೆ ಗಾಬರಿಗೊಂಡ ಮನೆಯವರು ಹುಡುಕಾಟ ಆರಂಭಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನದಿ ದಡದಲ್ಲಿ ಬಟ್ಟೆ, ಮೊಬೈಲ್ ಫೋನ್ ಗಳು ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಇನ್ನುಳಿದ ನಾಲ್ವರಿಗೆ ಹುಡುಕಾಟ ಮುಂದುವರೆಸಿದ್ದಾರೆ.