ಪುತ್ತೂರು,ಮಾ31(AZM):ಪುತ್ತೂರಿನ ಜೆಡಿಎಸ್ ನ ಮಾಜಿ ಅಧ್ಯಕ್ಷ ಕೈಲಾಸ್ ಗೌಡ ಅವರು, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಹಮ್ಮದ್ ಕುಞಿಯವರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಒಕ್ಕಲಿಗರ ಪಕ್ಷದಲ್ಲೇ ಇದ್ದು, ಒಕ್ಕಲಿಗರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. ಅವರು ಪಕ್ಷದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೈತ್ರಿ ಧರ್ಮದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಒಕ್ಕಲಿಗರ ಬಗ್ಗೆ ಹಗುರವಾಗಿ ಮಾತನಾಡಿದ ಜಿಲ್ಲಾಧ್ಯಕ್ಷರನ್ನು ವಜಾ ಮಾಡಬೇಕು. ಎಂದು ಇದೇ ವೇಳೆ ಕೈಲಾಸ್ ಗೌಡರು ಹೈಕಮಾಂಡ್ ಗೆ ಆಗ್ರಹಿಸಿದರು.ಇನ್ನು ಜಿಲ್ಲಾಧ್ಯಕ್ಷರನ್ನು ವಜಾ ಗೊಳಿಸದಿಂದ್ದರೆ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿಯೂ ಇದೇ ವೇಳೆ ಅವರು ಎಚ್ಚರಿಸಿದರು.