ಕಾರ್ಕಳ, ನ 07: ಪಶ್ಚಿಮ ಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಈದು ಗ್ರಾಮದಲ್ಲಿ ಆವರಣ ಇಲ್ಲದ ಬಾವಿಯೊಂದಕ್ಕೆ ಕಾಡು ಕೋಣವೊಂದು ಬಿದ್ದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ .
ಈದು ಪರಿಸರದ ಮಲಂಜ ಆನಂದ ಪೂಜಾರಿ ಎಂಬವರ ಸೇರಿದ ಜಾಗದಲ್ಲಿ ಸುಮಾರು 20 ಅಡಿ ಆಳದ ಬಾವಿಯಿಂದ ಪ್ರಾಣಿಯೊಂದು ಕೂಗುವ ಶಬ್ದ ಕೇಳಿ ಬಂದಿರುವ ಹಿನ್ನಲೆ ಅಲ್ಲಿ ಹೋಗಿ ನೋಡಿದಾಗ ಕಾಡು ಕೋಣ ಬಾವಿಗೆ ಬಿದ್ದ ವಿಚಾರ ಬೇಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರು. ಜೆಸಿಬಿ ಮೂಲಕ ಬಾವಿಗೆ ಕಣಿ ತೋಡಿ ಕಾಡು ಕೋಣವನ್ನು ರಕ್ಷಿಸುವ ಕಾರ್ಯದಲ್ಲಿ ಸ್ಥಳೀಯರು ಮುಂದಾದರು. ತಡರಾತ್ರಿ ಆಹಾರ ಹುಡುಕುತ್ತಾ ಬಂದಿದ್ದ ಕಾಡುಕೋಣ ಸಂಜೆ ಸುಮಾರು ಐದು ಗಂಟೆಗೆ ಮರಳಿ ಕಾಡಿಗೆ ಸೇರಿತು. ಶ್ರೀಧರ್ ಮಲೆಕುಡಿಯ ಹಾಗೂ ಮತ್ತಿತ್ತರು ಕಾಡುಕೋಣ ರಕ್ಷಿಸುವ ಕಾರ್ಯದಲ್ಲಿ ಮುಂದಾಗಿದ್ದರು.