ಬೆಳ್ತಂಗಡಿ, ಏ01(SS): ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಗೆಲ್ಲಿಸುವಲ್ಲಿ ಚೌಕಿದಾರ್ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ಹಾಲಿ ಸಂಸದರು ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಪೇಜ್ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಗೆಲ್ಲಿಸುವಲ್ಲಿ ಚೌಕಿದಾರ್ ಆಗಿ ಸೇವೆ ಸಲ್ಲಿಸುತ್ತೇನೆ. ಈ ದೇಶಕ್ಕೆ ಮತ್ತೂಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಸುನಿಲ್ ಕುಮಾರ್, ದೇಶದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ. ಸಮಾಜದಲ್ಲಿ ಎಲ್ಲ ಸ್ಥರದ ಜನರ ಅಭಿವೃದ್ಧಿಗೆ ನಾನಾ ತರಹದ ಯೋಜನೆಯನ್ನು ಬಿಜೆಪಿ ನೀಡಿದೆ. ಹೀಗಾಗಿ ಮೋದಿ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಕಾಂಗ್ರೆಸ್ ಸರಕಾರ ತೋರದ ಎದೆಗಾರಿಕೆಯನ್ನು ಮೋದಿ ಪ್ರದರ್ಶಿಸಿದ್ದಾರೆ. ಆದರೆ 54 ಇಂಚಿನ ಎದೆಗಾರಿಕೆ ಎಂದು ಕಾಂಗ್ರೆಸ್ ಮೋದಿಯನ್ನು ಟೀಕಿಸುತ್ತದೆ. ಬೆಳ್ತಂಗಡಿಯ ಶಾಸಕರು ಐದು ವರ್ಷಗಳಲ್ಲಿ ಮಾದರಿ ಬೆಳ್ತಂಗಡಿ ಮಾಡುವ ಗುರಿ ಹೊಂದಿದ್ದಾರೆ. ಹೀಗಾಗಿ ಕಾರ್ಯಕರ್ತರೆಲ್ಲರು ಶ್ರಮಿಸಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.