ಉಡುಪಿ, ಏ01(SS): ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ 'ಮೈ ಭೀ ಚೌಕಿದಾರ್' ಆಂದೋಲನಕ್ಕೆ ಪ್ರತಿಯಾಗಿ ಕಾಂಗ್ರೆಸ್ನ 'ಚೌಕಿದಾರ್ ಚೋರ್ ಹೈ' ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿದೆ. ಸದ್ಯ ಕಾಂಗ್ರೆಸ್ - ಬಿಜೆಪಿ ನಡುವಿನ ರಾಷ್ಟ್ರಮಟ್ಟದ 'ಚೌಕಿದಾರ್' ಜಗಳ ಉಡುಪಿ ಜಿಲ್ಲೆಗೂ ತಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದದ ನೇರಪ್ರಸಾರ ವ್ಯವಸ್ಥೆಯನ್ನು ಬಿಜೆಪಿ ವತಿಯಿಂದ ಚೌಕಿದಾರರ ಜತೆ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಮಾಡಲಾಗಿತ್ತು. ಈ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ತಮ್ಮ ವಾಟ್ಸ್ಯಾಪ್ ಡಿಪಿ, ಟ್ವಿಟರ್ ಸಹಿತ ವಾಹನಗಳಲ್ಲಿ 'ಮೈ ಭೀ ಚೌಕಿದಾರ್' ಘೋಷಣೆ ಹಾಕಿದ್ದಾರೆ.
ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಸ್ಛೂರ್ತಿ ಪಡೆದ ಕಾಂಗ್ರೆಸಿಗರು ತಮ್ಮ ವಾಹನಗಳಲ್ಲಿ 'ಚೌಕಿದಾರ್ ಚೋರ್ ಹೈ' ಸ್ಟಿಕ್ಕರ್ ಅಳವಡಿಸಿದ್ದು, ಬಿಜೆಪಿಗರ ಕಣ್ಣು ಕೆಂಪಗಾಗಿಸಿದೆ. ಮಾತ್ರವಲ್ಲ, ಕಾಂಗ್ರೆಸ್ನ 'ಚೌಕಿದಾರ್ ಚೋರ್ ಹೈ' ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿದೆ.
ಬಿಜೆಪಿಯ ನಾನೂ ಚೌಕಿದಾರ,ಮೈ ಭೀ ಚೌಕೀದಾರ್ಗೆ ಪ್ರತಿಯಾಗಿ ಕಾಂಗ್ರೆಸಿಗರು ಭಾನುವಾರ 50ಕ್ಕೂ ಅಧಿಕ ಕಾರು, ಅಟೋ ರಿಕ್ಷಾಗಳಲ್ಲಿ 'ಚೌಕಿದಾರ್ ಚೋರ್ ಹೈ' ಸ್ಟಿಕ್ಕರ್ ಅಳವಡಿಸಿ ಪ್ರತಿ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರದಲ್ಲೂ 'ಚೌಕಿದಾರ್' ಈಗ ಆದ್ಯತೆಯ ವಿಷಯವಾಗಿದೆ.