ಮಂಗಳೂರು, ಮಾ01(SS): ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅನೇಕ ಬಾರಿ ತದನಂತರ ಎಂಬ ಪದವನ್ನು ಪದೇ ಪದೇ ಉಚ್ಚರಿಸಿದ್ದು, ಇದೀಗ ಜಿಲ್ಲೆಯಲ್ಲಿ ತದ ನಂತರ ಎಂಬ ಪದ ಟ್ರೋಲ್ ಪೇಜ್ಗಳ ಕೈಗೆ ಸಿಕ್ಕಿ ಸದ್ದು ಮಾಡುತ್ತಿದೆ.
ಕರಾವಳಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಚಾರದ ನಿಮಿತ್ತ ಆರಂಭವಾದ ಕೆಲ ಫೇಸ್ಬುಕ್ ಪೇಜ್ಗಳಲ್ಲಿ “ಚಲ್ ಹಠ್ ಮಿಥುನ್ ರೈ” ಎಂಬ ಹೊಸ ಅಭಿಯಾನ ಆರಂಭವಾಗಿದೆ. ಅಭ್ಯರ್ಥಿ ಘೋಷಣೆಗೂ ಮೊದಲು ನಳಿನ್ ಕುಮಾರ್ ಅವರ ವಿರೋಧವಾಗಿ “ನಳಿನ್ ಹಠಾವೋ” ಎಂಬ ಅಭಿಯಾನ ಆರಂಭಿಸಿದ್ದು ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಚುನಾವಣೆಗೆ ದಿನಗಳು ಬಾಕಿ ಉಳಿದಿರುವಾಗಲೇ “ಚಲ್ ಹಠ್ ಮಿಥುನ್ ರೈ” ಎಂಬ ಹೊಸ ಘೋಷಣೆ ಸಖತ್ ವೈರಲ್ ಆಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಿಥುನ್ ರೈ ವಿರುದ್ಧ ಪರ ವಿರೋಧ ಪೋಸ್ಟರ್ಗಳು ಹರಿದಾಡುತ್ತಿದ್ದು ಟ್ರೋಲ್ ಪೇಜ್ಗಳು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ತಮ್ಮ ಟ್ರೋಲ್ಗಳಿಗೆ ಬಳಸಿಕೊಂಡಿದ್ದಾರೆ. ಮಿಥುನ್ ರೈ ಪದೇ ಪದೇ ಉಚ್ಚರಿಸಿದ ತದನಂತರ ಪದವನ್ನು ಹಿಡಿದು ಜನ ಕಾಲೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.