ಸುಳ್ಯ, ಎ02(SS): ವಿಜಯ ಬ್ಯಾಂಕ್ ವಿಲೀನಕ್ಕೆ ಮುನ್ನುಡಿ ಬರೆದವರು ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್ ಮುಖರ್ಜಿ, ಚಿದಂಬರಂ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್ ಮುಖರ್ಜಿ, ಚಿದಂಬರಂ ವಿಜಯ ಬ್ಯಾಂಕ್ ವಿಲೀನಕ್ಕೆ ಮುನ್ನುಡಿ ಬರೆದವರು. ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೀರಪ್ಪ ಮೊಯ್ಲಿ ಇದಕ್ಕೆ ಒಪ್ಪಿಗೆ ನೀಡಿದವರು. ಆ ಅವಧಿಯಲ್ಲಿ ಜಿಲ್ಲೆಯ ಕಾಂಗ್ರೆಸಿಗರಿಗೆ ವಿಜಯ ಬ್ಯಾಂಕ್ ವಿಲೀನವಾಗುವ ವಿಚಾರ ತಿಳಿದಿದ್ದರೂ ಯಾಕೆ ತಡೆದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬ್ಯಾಂಕ್ ವಿಲೀನ ಪ್ರಕ್ರಿಯೆ ಅಂತರಾಷ್ಟ್ರೀಯ ಒಪ್ಪಂದವಾಗಿರುವ ಕಾರಣ ಬದಲಾಯಿಸುವುದು ಕಷ್ಟ. ಬರೋಡಾ, ದೇನಾ ಬ್ಯಾಂಕ್ ಹೆಸರಿನ ಜತೆಗೆ ವಿಜಯ ಬ್ಯಾಂಕ್ ಹೆಸರು ಕೂಡ ಇರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ.ಅದಕ್ಕೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಹಿಂದಿನ ಸರಕಾರ ಪಾಸ್ ಮಾಡಿದ ಬಿಲ್ ಅನ್ನು ಬಳಿಕದ ಸರಕಾರ ಬದಲಾಯಿಸಲಾಗದು. ಹೀಗಾಗಿ ಎನ್ಡಿಎ ಸರಕಾರ ಅದನ್ನು ಮುಂದುವರೆಸಿದೆ. ಇದರಲ್ಲಿ ಎನ್ಡಿಎ ಸರಕಾರದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.