ಮಂಗಳೂರು ನ ೮: ಗುಜರಾತ್ನಿಂದ ಮಹಿಳೆಯೊಬ್ಬಳು ಮಗುವೊಂದನ್ನು ಅಪಹರಿಸಿಕೊಂಡು ಬಂದಿದ್ದು ಸದ್ಯ ಈಕೆ ನಗರದ ಅಸುಪಾಸಿನಲ್ಲಿ ಓಡಾಡುತ್ತಿರುವ ಬಗ್ಗೆ ಆಕೆಯ ಮೊಬೈಲ್ ಟವರ್ ಲೊಕೇಶನ್ ತೋರಿಸಿದೆ. ಕಿಂಜಾಲ್ ಎಂಬ ಮಹಿಳೆಯು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಐದು ವರ್ಷದ ಕಿಂಜಾಲ್ ಎಂಬ ಹೆಸರಿನ ಹೆಣ್ಣು ಮಗುವನ್ನು ಅಪಹರಿಸಿಕೊಂಡು ಬಂದಿದ್ದು, ಮಂಗಳೂರು ಸಮೀಪದ ಕಾವೂರಿನ ಪಿವಿಸಿ ಕಾಂಪ್ಲೆಕ್ಸ್ ಬಳಿ ಇರುವುದು ಆಕೆಯ ಟವರ್ ಲೊಕೇಶನ್ ಮೂಲಕ ನವೆಂಬರ್ ೬ ರಂದು ಮದ್ಯಾಹ್ನ ೧೧ ಗಂಟೆಗೆ ಗೊತ್ತಾಗಿದೆ. ನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆಕೆ ಸುತ್ತಾಡಿರುವ ಮಾಹಿತಿ ಇದೆ.
ಈ ಮಹಿಳೆ ಮತ್ತು ಮಗುವನ್ನು ನೋಡಿದರೆ ಕಾವೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2220533 ಅಥವಾ ಗುಜರಾತ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಚೇತನ್ ಜಡೇಜಾ ಅವರ ಮೊಬೈಲ್ ಸಂಖ್ಯೆ 9879324147 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ. ಮಗುವಿನ ಪತ್ತೆಗೆ ಸಹಕರಿಸಿದವರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಜಡೇಜಾ ಹೇಳಿದ್ದಾರೆ.
ಗುಜರಾತ್ನಿಂದ ರೇಖಾ ಯಾನೆ ಶಹನಾಝ್ ಎಂಬ ಮಹಿಳೆಯು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಐದು ವರ್ಷದ ಕಿಂಜಾಲ್ ಎಂಬ ಹೆಸರಿನ ಹೆಣ್ಣು ಮಗುವನ್ನು ಅಪಹರಿಸಿಕೊಂಡು ಬಂದಿದ್ದು, ಮಂಗಳೂರು ಸಮೀಪದ ಕಾವೂರಿನ ಪಿವಿಸಿ ಕಾಂಪ್ಲೆಕ್ಸ್ ಬಳಿ ಇರುವುದು ಆಕೆಯ ಟವರ್ ಲೊಕೇಶನ್ ಮೂಲಕ ನವೆಂಬರ್ ೬ರಂದು ಗೊತ್ತಾಗಿದೆ. ನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆಕೆ ಸುತ್ತಾಡಿರುವ ಮಾಹಿತಿ ಇದೆ.
ಈ ಮಹಿಳೆ ಮತ್ತು ಮಗುವನ್ನು ಕಂಡವರು ಕಾವೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2220533 ಅಥವಾ ಗುಜರಾತ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಚೇತನ್ ಜಡೇಜಾ ಅವರ ಮೊಬೈಲ್ ಸಂಖ್ಯೆ 9879324147 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ. ಮಗುವಿನ ಪತ್ತೆಗೆ ಸಹಕರಿಸಿದವರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಜಡೇಜಾ ಹೇಳಿದ್ದಾರೆ.
ರೇಖಾ ಯಾನೆ ಶಹನಾಝ್
ಕಿಂಜಾಲ್