ಮಂಗಳೂರು, ನ 08 : ಇತ್ತೀಚೆಗೆ ಯಾಕೋ ನಗರದಲ್ಲಿ ಗಾಂಜಾ ಬಹಳ ಸದ್ದು ಮಾಡುತ್ತಿದ್ದೆ. ಗಾಂಜಾ ಮಾಫಿಯಾದ ಹಿಂದೆ ಬಿದ್ದಿರುವ ಪೊಲೀಸರು ಕೂಡಾ ಸೋಮವಾರವಷ್ಟೇ 72 ಕೆಜಿ ಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಇದೀಗ ನಗರದಲ್ಲಿ ಹುಲುಸಾಗಿ ಬೆಳೆದಿದ್ದ ಗಾಂಜಾ ಗಿಡವೊಂದನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಬಂಗ್ರ ಕೂಳೂರು ಗ್ರಾಮದ ಕೋಡಿಕಲ್ ಕ್ರಾಸ್ ಬಳಿ ಸಿಮೆಂಟ್ ದಾಸ್ತಾನು ಕಟ್ಟಡ ಆವರಣದಲ್ಲಿ ಬೆಳೆಸಿದ್ದ ಸುಮಾರು 12 ಅಡಿಉದ್ದದ ಗಾಂಜಾ ಗಿಡವನ್ನು ರೌಡಿ ನಿಗ್ರಹ ದಳದ ಪೊಲೀಸ್ ನೀರಿಕ್ಷಕ ರವೀಶ್ ಎಸ್. ನಾಯಕ್ ಪತ್ತೆ ಹಚ್ಚಿದ್ದಾರೆ. ವಿನಿತ್ ಜಲಾನ್ ಅವರ ಮಾಲಿಕತ್ವದ ಈ ಸ್ಥಳವನ್ನು ಹ್ಯಾರಿಸ್ ಮತ್ತು ಖಾಲಿದ್ ಅವರಿಗೆ ಬಾಡಿಗೆಗೆ ನೀಡಿದ್ದರು. ಇದೇ ಜಾಗದಲ್ಲಿ ಸಿಮೆಂಟ್ ದಾಸ್ತಾನು ಮಾಡಿ ಇನ್ನೊಂದೆಡೆ ಗಾಂಜಾ ಗಿಡ ಬೆಳೆದಿದ್ದರು. ಇದೀಗ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದೆ.