ಬೆಂಗಳೂರು : ಗಗನಸಖಿಯೊಬ್ಬಳಿಗೆ ವಿಮಾನ ಯಾನದ ವೇಳೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಮಾಡಿದ ಆರೋಪಿ ಪೊಲೀಸರ ವಶವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕೊಲ್ಕತ್ತಾದ ಕ್ಷಿತಿಜ್ ಗುರುಂಗ್ ಎಂಬಾತ ಪ್ರಯಾಣದ ವೇಳೆ ಗಗನಸಖಿ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ . ಅಲ್ಲದೆ, ಪ್ರಯಾಣಿಕನ ಈ ವರ್ತನೆಯನ್ನು ಪ್ರಶ್ನಿಸಿದ್ದ ಮತ್ತೋರ್ವ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಬೆಂಗಳೂರಿನ ಖಾಸಗಿ ಕಾಲೇಜಿನ M.Tech ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈತನ ದುರ್ವರ್ತನೆ ಕಂಡ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಗಲಾಟೆ ಬಿಡಿಸಿದ್ರು. ಬಳಿಕ ಇಬ್ಬರು ಗಗನ ಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಆರೋಪಿ ವಿರುದ್ದ ದೂರು ದಾಖಲಿಸಿದ್ದು , ಈ ದೂರಿನ ಅನ್ವಯ ಪೊಲೀಸರು ಆರೋಪಿಯ ಕೈಗೆ ಕೋಳ ತೊಡಿಸಿದ್ದಾರೆ.