ಮಂಗಳೂರು, ಎ03(SS): ಗುಡ್ ಫ್ರೈಡೆ ಸಮಯದಲ್ಲೇ ಚುನಾವಣೆ ಬಂದಿರುವುದರಿಂದ ಮತ ಕೇಂದ್ರ ಬದಲಾವಣೆಗೆ ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ವತಿಯಿಂದ ದ.ಕ ಜಿಲ್ಲಾ ಚುನಾವಣಾ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜಾ, ಎ.17ರಿಂದ ಐದು ದಿನಗಳವರೆಗೆ ಕ್ರೈಸ್ತರಿಗೆ ಪವಿತ್ರವಾದ ಹಬ್ಬವಾಗಿರುವುದರಿಂದ ಕ್ರೈಸ್ತ ಸಂಸ್ಥೆಗಳಿಂದ ಮತಗಟ್ಟೆಯನ್ನು ಸ್ಥಳಾಂತರಿಸುವಂತೆ, ಕ್ರೈಸ್ತ ಧರ್ಮದ ಚುನಾವಣಾ ಅಧಿಕಾರಿ ಹಾಗೂ ನೌಕರರನ್ನು ಚುನಾವಣಾ ಕರ್ತವ್ಯದಿಂದ ಕೈಬಿಡುವಂತೆ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಚುನಾವಣಾ ಆಯೋಗ ಸಮುದಾಯದ ಮನವಿಯನ್ನು ಪರಿಗಣಿಸಬೇಕು ಎಂದು ವಿನಂತಿಸಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನಲೆ. ಚರ್ಚುಗಳಿಗೆ ಹೊಂದಿಕೊಂಡ ಶಾಲೆಗಳನ್ನು ಮತ ಕೇಂದ್ರವಾಗಿಸಲಾಗಿದೆ. ಪವಿತ್ರ ದಿನ ಚಚರ್ಚುಗಳಲ್ಲಿ ಜನ ಸೇರುವುದರಿಂದ ಮತ ಕೇಂದ್ರ ಬದಲಾವಣೆ ಮಾಡಬೇಕು ಎಂದು ದ.ಕ ಜಿಲ್ಲಾ ಚುನಾವಣಾ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರಲ್ಲಿ ಮನವಿ ಮಾಡಿದ್ದಾರೆ.