ಮಂಗಳೂರು, ಎ03(SS): ಪ್ರಜಾಪ್ರಭುತ್ವದ ಕೀಲಿಕೈಯನ್ನು ಜನರಿಗೆ ತಲುಪಿಸುವುದೇ ಪ್ರಜಾಕೀಯ ಪಕ್ಷದ ಗುರಿ ಎಂದು ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ಜನರಿಗೆ ವಿಚಾರಗಳನ್ನು ತಲುಪಿಸುವುದೇ ಪ್ರಜಾಕೀಯ ಪಕ್ಷದ ಗುರಿ. ಸಿಎಂ ಮತ್ತು ಪ್ರಧಾನಿಗೆ ಸಂಬಳ ಕೊಡುವುದು ಜನರು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ಅಧಿಕಾರ ನಡೆಸಬೇಕು. ಜನರು ಹೇಳಿದ ಹಾಗೆ ವ್ಯವಸ್ಥೆ ನಡೆಯಬೇಕು. ದೇಶದಲ್ಲಿ ಜ್ಞಾನ ಉಳ್ಳವರು ಮುಂದೆ ಬರಬೇಕು. ಪಾರದರ್ಶಕ ಆಡಳಿತ ಬರಬೇಕು. ಜನರು ವಿಚಾರ ಮಾಡಿ ಮತ ಹಾಕಬೇಕು ಎಂದು ತಿಳಿಸಿದರು.
ಜಾತಿ - ಧರ್ಮದ ಲೆಕ್ಕಾಚಾರ ಹಾಕಿ ಮತ ಕೇಳುವವರೇ ಹೆಚ್ಚು. ನಮ್ಮದು ರಾಜಕೀಯ ಪಕ್ಷ ಅಲ್ಲವೇ ಅಲ್ಲ. ನಮ್ಮದು ಪ್ರಜಾಕೀಯ ಪಕ್ಷವಾಗಿದೆ. ರಾಜಕೀಯಕ್ಕೆ ತದ್ವಿರುದ್ಧವಾದ ಪಕ್ಷ ನಮ್ಮದು. ನಮ್ಮ ಪಕ್ಷದಲ್ಲಿ ನಾವು ಗೆಲ್ಲುವುದಲ್ಲ, ಜನ ಗೆಲ್ಲಬೇಕು. ಪ್ರಜಾಕೀಯದಲ್ಲಿ ಜನರೇ ರಾಜರು ಎಂದು ಹೇಳಿದರು.