ಬೆಳ್ತಂಗಡಿ,ಏ 05 (MSP): ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಏ.5 ರ ಗುರುವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದೆ.
ಮೃತರನ್ನು ಸಂಜೀವ ಮೂಲ್ಯ (55 ) ಮತ್ತು ಅವರ ಪತ್ನಿ ಸರೋಜಿನಿ ಮೂಲ್ಯ (50 ) ಎಂದು ಗುರುತಿಸಲಾಗಿದೆ. ಘಟನೆಗೆ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.
ಸ್ವಿಚ್ ಬೋರ್ಡ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಂಡಾಗ ಸರೋಜಿನಿ ಅವರು ವಿದ್ಯುತ್ ಸಂಪರ್ಕ ತಪ್ಪಿಸಲೆಂದು ಪ್ಯುಸ್ ತೆಗೆಯಲು ಹೋದಾಗ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಇದನ್ನು ಕಂಡು ಪತಿ ಸಂಜೀವ ಮೂಲ್ಯ, ಪತ್ನಿಯ ಸಹಾಯಕ್ಕೆ ಧಾವಿಸಿದ್ದಾರೆ. ಅದರೆ ಅವರಿಗೂ ಶಾಕ್ ತಗುಲಿ ಇಬ್ಬರೂ ಸಾವನಪ್ಪಿದ್ದಾರೆ.
ಘಟನೆಯಿಂದ ಸುಮಾರು 5-6 ಮನೆಗಳ ವಿದ್ಯುತ್ ಸಲಕರಣೆ ವಯರ್ ಎಲ್ಲಾ ಸುಟ್ಟು ಕರಕಲಾಗಿದೆ.