ಬಂಟ್ವಾಳ, ಎ05(SS): ಇಲ್ಲಿನ ಸರ್ಕಾರಿ ಶಾಲೆಯೊಂದರ 135 ಮಂದಿ ಮಕ್ಕಳ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಕೆಲಸವನ್ನು ವ್ಯಾಪರಿಯೊಬ್ಬರು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮೆಲ್ಕಾರ್ನ ಚಂದ್ರಿಕಾ ವೆಜಿಟೇಬಲ್ಸ್ನ ಮಾಲೀಕ ಮಹಮ್ಮದ್ ಶರೀಫ್ ಸರ್ಕಾರಿ ಶಾಲೆಯ ಮಕ್ಕಳಿಗೆ ತರಕಾರಿಗಳನ್ನು ಉಚಿತವಾಗಿ ನೀಡುತ್ತಿರುವ ಯುವಕ.
ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ 135 ಮಕ್ಕಳ ಬಿಸಿಯೂಟಕ್ಕೆ ತರಕಾರಿಗಳನ್ನು ಉಚಿತವಾಗಿ ಮಹಮ್ಮದ್ ಶರೀಫ್ ನೀಡುತ್ತಿದ್ದಾರೆ.
ಬಿಸಿಯೂಟಕ್ಕೆ ಪೂರಕವಾದ ತರಕಾರಿಗಳನ್ನು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ನೀಡುತ್ತಿರುವ ಶರೀಫ್, ಆಲೂಗಡ್ಡೆ, ಬೀಟ್ರೂಟ್, ಸೌತೆಕಾಯಿ ಸೇರಿದಂತೆ ಬೇರೆ ಬೇರೆ ತರಕಾರಿಗಳನ್ನು ಮಕ್ಕಳಿಗೆ ನೀಡಿ ಮಾದರಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಮಹಮ್ಮದ್ ಶರೀಫ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.