ಮಂಗಳೂರು,ಏ 05 (MSP): ನಗರದ ಲಾಲ್ ಭಾಗ್ ವೃತ್ತದಲ್ಲಿ ಗುರುವಾರ ಲಾರಿಯೊಂದರಿಂದ ಆಯಿಲ್ ಸೋರಿಕೆಯಾದ ಪರಿಣಾಮ ದ್ವಿ ಚಕ್ರ ಸವಾರರೊಬ್ಬರು ಬಿದ್ದು ಗಾಯಗೊಂಡರು. ಇದನ್ನು ಗಮನಿಸಿದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಆಯಿಲ್ ಬಿದ್ದಲ್ಲಿಗೆ ಮಣ್ಣು ತಂದು ಹಾಕಿ ಪುನಾರವರ್ತಿತವಾಗಿ ದ್ವಿ ಚಕ್ರ ಸವಾರರು ಸ್ಕಿಡ್ ಬೀಳುವುದನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಆಯಿಲ್ ಸೋರಿಕೆಯಾದ ಬಗ್ಗೆ ಗಮನಕ್ಕೆ ಬಂದಾಗ ಲಾಲ್ ಭಾಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಶ್ರೀಕಾಂತ್ ತಕ್ಷಣ ಮನಪಾ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆದರೆ ಅಲ್ಲಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಸಿಬ್ಬಂದಿ ನವಾಝ್ ಎಎಸ್ ಐ ಸುರೇಶ್ ಕುಮಾರ್ ಅವರು ಮಣ್ಣು ತಂದು ರಸ್ತೆಯಲ್ಲಿ ಹರಡಿ ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬೀಳದಂತೆ ಕ್ರಮ ಕೈಗೊಂಡರು. ಅವರ ಸಾಮಾಜಿಕ ಬದ್ಧತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.