ಮಂಗಳೂರು, ನ 09: ನಗರದಲ್ಲಿ ನಾಳೆ ನಡೆಯಲಿರುವ ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಹಾಗೂ ಬಿಜೆಪಿಯ ನವ ಕರ್ನಾಟಕ ಪರಿವರ್ತಾನ ರ್ಯಾಲಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಪಥ ಸಂಚಲನ ಗುರುವಾರ ನಡೆಯಿತು. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ವಿಶ್ವಾಸ ಗಳಿಸಲು, ಕೇಂದ್ರ ಅರೆ ಮಿಲಿಟರಿ ಪಡೆ, ಕ್ಷಿಪ್ರ ಕಾರ್ಯಚರಣೆ ಪಡೆ ಹಾಗೂ ನಗರ ಪೊಲೀಸರು ಪಥ ಸಂಚಲನ ನಡೆಸಿದರು. ನಗರದ ನೆಹರು ಮೈದಾನವನ್ನು ಕೇಂದ್ರಿಕರಿಸಿ ಪಂಪ್ ವೆಲ್ , ಕಂಕನಾಡಿ ರಸ್ತೆ, ನೆಲ್ಲಿಕಾಯಿ ರೋಡ್ ,ಎಂ.ಜಿ ರೋಡ್ ಮುಂತಾದ ಕಡೆಗಳಲ್ಲಿ ಪಥ ಸಂಚಲನ ನಡೆಸಿತು.