ಕೊಪ್ಪ, ಎಂ6(SS): ಏ.18ರವರೆಗೆ ನನ್ನ ಜವಾಬ್ದಾರಿ ನಿಮಗೆ, ಗೆದ್ದ ನಂತರ ನಿಮ್ಮೆಲ್ಲರ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಅಭಿವೃದ್ಧಿ ಸಂಕೇತವಾಗಿರುವ ಪ್ರಮೋದ್ ಮಧ್ವರಾಜ್ ಬೇಕೋ, ಕ್ಷೇತ್ರವನ್ನು ನಿರ್ಲಕ್ಷಿಸುವ ಶೋಭಾ ಕರಂದ್ಲಾಜೆ ಬೇಕೋ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭೆ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಖಾಯಂ ನಿವಾಸವಿಲ್ಲ. ಆದರೆ, ಪ್ರಮೋದ್ ಮಧ್ವರಾಜ್ ಗೆದ್ದರೆ ಸಮಸ್ಯೆ ಬಗೆಹರಿಸಲು ಸ್ವಂತ ಖರ್ಚಿನಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲರನ್ನು ನೀಡಿ ಹೋರಾಡುತ್ತೇನೆ. ಏ.18ರವರೆಗೆ ನನ್ನ ಜವಾಬ್ದಾರಿ ನಿಮಗೆ, ನಂತರ ನಿಮ್ಮೆಲ್ಲರ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಸಚಿವೆ ಜಯಮಾಲಾ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಬೇಟಿ ಪಡಾವ್, ಬೇಟಿ ಬಚಾವ್ ಯೋಜನೆಗೆ 282 ಕೋಟಿ ರೂ. ಆಯವ್ಯಯದಲ್ಲಿ ಇರಿಸಿದ್ದು, ಅದರಲ್ಲಿ ಶೇ.51ರಷ್ಟನ್ನು ಭಾವಚಿತ್ರದ ಜಾಹೀರಾತಿಗಾಗಿ ಬಳಸಿದ್ದಾರೆ ಎಂದು ಟೀಕಿಸಿದ್ದಾರೆ.