ಮಂಗಳೂರು, ಎಂ6(SS): ದೇಶದಲ್ಲಿ ಯುವ ಮತದಾರರು ಸೇರಿದಂತೆ ವಿದ್ಯಾರ್ಥಿಗಳು ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಲು ಬಯಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದಲ್ಲಿ ನಡೆದ ‘ಮೇ ಭೀ ಚೌಕಿದಾರ್’ ವಿದ್ಯಾರ್ಥಿಗಳ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುವುದು ನಿಶ್ಚಿತ. ಯುವ ಮತದಾರರು ಸೇರಿದಂತೆ ವಿದ್ಯಾರ್ಥಿಗಳು ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಲು ಬಯಸುತ್ತಿದ್ದಾರೆ. ಹೀಗಾಗಿ ಮೋದಿ ಖಂಡಿತಾ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಪ್ರಚಾರ ನಡೆಸಲು ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಅಭಿಯಾನ ನಡೆದ ವೇಳೆ ವಿದ್ಯಾರ್ಥಿಗಳಿಗೆ ಅವರು ಸಾಥ್ ನೀಡಿದರು.
ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಿದೆ. ಮತ್ತೂಂದೆಡೆ ರಾಜಕೀಯ ಪಕ್ಷಗಳ ಮುಖಂಡರಿಂದ ಧಾರ್ಮಿಕ ಕೇಂದ್ರಗಳ ಭೇಟಿಯೂ ಭರ್ಜರಿಯಾಗಿಯೇ ನಡೆಯುತ್ತಿದೆ.