ಮಣಿಪಾಲ, ಏ 06 (MSP): ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಲವು ಪ್ರದೇಶಗಳಿಗೆ ತೆರಳಿ ಮತಯಾಚನೆ ಮಾಡಿದರು. ಆಶ್ಚರ್ಯ ಎಂದರೆ, ಒಂದೆಡೆ ಮಾತ್ರ ಶೋಭಾ ಅವರು ತಮಗಾಗಿ ಮತ ಯಾಚಿಸಿದೆ, ಬಿಜೆಪಿಗೆ ಮತ ನೀಡಿ ಎಂದಷ್ಟೇ ಹೇಳಿ ಹೊರನಡೆದರು.
ಹೌದು ಶೋಭಾ ಕರಂದ್ಲಾಜೆ ತಾನು ಈ ಹಿಂದೆ ಸಮಾಜಿಕ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದ ಮಣಿಪಾಲದ ಮಾಹೆ ವಿವಿಗೆ ತೆರಳಿದರೂ ಅಲ್ಲಿ ತನಗಾಗಿ ಮತ ಯಾಚಿಸಿಲ್ಲ. ಮಾಹೆ ವಿ.ವಿ ಸಿಬ್ಬಂದಿಗಳಲ್ಲಿ ಕೇವಲ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿ ಕೈ ಮುಗಿದು ನಸುನಗೆ ಬೀರಿ ವಾಪಾಸ್ ತೆರಳಿದರು. ಈ ಪ್ರಚಾರ ಕಾರ್ಯ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆಯಿತು.
ಇದೇ ವೇಳೆ ಸಂಸ್ಥೆಯ ಸಿಬ್ಬಂದಿಗಳು ಮೋದಿ ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ನಗರಸಭಾ ಸದಸ್ಯೆ ಸುಮಿತ್ರಾ ನಾಯ್ಕ್, ವಿಜಯಲಕ್ಷ್ಮಿ, ಮಂಜುನಾಥ್ ಮಣಿಪಾಲ,ವಿಜಯ್ ಕೊಡವೂರು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಪೆರ್ಣಂಕಿಲ ಪಕ್ಷದ ಪ್ರಮುಖರಾದ ಮಹೇಶ್ ಠಾಕೂರ್ , ದಾವೂದ್ ಅಬೂಬಕ್ಕರ್, ಸುಬ್ಬಣ್ಣ ಪೈ , ಅಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.